` ಪ್ರೀತಿಸಿದ್ದಕ್ಕೆ ಕಣ್ಣು ಕಿತ್ತಿದ್ದ ಘಟನೆ.. ನೆನಪಿದೆಯಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghuveer real story
Raghuveer Movie Poster

ಅದು ನಡೆದದ್ದು 2011ರಲ್ಲಿ. ಪ್ರೇಯಸಿಯ ಮದುವೆಗೆ ಶುಭ ಕೋರಲು ಹೋಗಿದ್ದ ಯುವಕನನ್ನು ಯುವತಿಯ ಕಡೆಯವರು ಅದ್ಯಾವ ಪರಿ ಹೊಡೆದಿದ್ದರು ಎಂದರೆ, ಯುವಕನ ಕಣ್ಣೇ ಕಿತ್ತು ಹೋಗಿತ್ತು. ಮಂಡ್ಯ ಜಿಲ್ಲೆಯ ಇಂಡುವಾಳ ಗ್ರಾಮದ ರಘು, ಕಣ್ಣು ಕಳೆದುಕೊಂಡಿದ್ದ.

ಜಿಮ್ ಮಾಡುತ್ತಿದ್ದ ರಘುಗೆ ಎದುರಾದ ದುಸ್ಥಿತಿಯನ್ನು ಕರ್ನಾಟಕದ ನೂರಾರು ಜನ ಮರುಗಿದ್ದರು. ಚಿತ್ರರಂಗದಲ್ಲಿ ದುನಿಯಾ ವಿಜಯ್, ಪ್ರೇಮ್, ಎಸ್.ನಾರಾಯಣ್ ಸೇರಿದಂತೆ ಹಲವರು ಜಿಮ್ ರಘುಗೆ ಸಾಂತ್ವನ ಹೇಳಿದ್ದರು. ಒಂದು ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ, ಮತ್ತೊಂದು ಕಣ್ಣಿನ ಅರ್ಧ ದೃಷ್ಟಿಯ ಬೆಳಕಲ್ಲೇ ಬದುಕುತ್ತಿದ್ದ ರಘುಗೆ ಇವತ್ತಿಗೂ ಜಗತ್ತನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ. 

ಆ ಪ್ರೀತಿಯ ಕಥೆಯೇ.. ರಘುವೀರ. ರಘುವೀರ ಚಿತ್ರದ ನಾಯಕ ಹರ್ಷಗೆ ರಘು ಹಳೆಯ ಸ್ನೇಹಿತ. ಕೆಲವು ವರ್ಷಗಳ ಹಿಂದೆ ಬಣ್ಣ ಬಣ್ಣದ ಲೋಕ ಎಂಬ ಚಿತ್ರವನ್ನು ಒಟ್ಟಿಗೇ ಮಾಡಿದ್ದರು ಹರ್ಷ ಮತ್ತು ರಘು. ಆದರೆ, ಆ ಚಿತ್ರ ಸಿದ್ಧವಾಗುವುದರೊಳಗೆ ರಘು ದೃಷ್ಟಿಯನ್ನೇ ಕಳೆದುಕೊಂಡಿದ್ದ. ಈಗ ಪ್ರೀತಿಗಾಗಿ ಕಣ್ಣು ಕಳೆದುಕೊಂಡ ರಘುವಿನ ಪ್ರೇಮ ಕಥೆ, ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ.

 

 

 

16 Years To Majestic Gallery

Valentine Special Gallery