` ಮಂಜರಿಯಲ್ಲಿದೆಯಂತೆ ಹಾರರ್ ಶಾಕ್ ಟ್ರೀಟ್‍ಮೆಂಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manjari movie image
Roopika In Manjari

ಇದೇ ವಾರ ತೆರೆಗೆ ಬರುತ್ತಿರುವ ಹಾರರ್ ಸಿನಿಮಾ ಮಂಜರಿಯಲ್ಲಿ ಶಾಕ್ ಟ್ರೀಟ್‍ಮೆಂಟ್‍ಗಳಿವೆಯಂತೆ. ಸರಳ ಕಥೆಯಲ್ಲಿ ಪ್ರೀತಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಆದರೆ, ಚಿತ್ರದ ಕಥೆಯ ಪ್ರಮುಖ ಎಳೆ ಹಾರರ್. ರೂಪಿಕಾ ವಿಭಿನ್ನವಾಗಿ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. ಅದಕ್ಕೆ ಸ್ಯಾಂಪಲ್‍ಗಳೂ ಇವೆ.

ಒಂದೂವರೆ ವರ್ಷದ ಗ್ಯಾಪ್ ನಂತರ ಬಂದಿರುವ ರೂಪಿಕಾ, ಚಿತ್ರದಲ್ಲಿ ತಮ್ಮ ಮುದ್ದಿನ ಮುಖದಲ್ಲೇ ಭಯ ಹುಟ್ಟಿಸುತ್ತಾರೆ. ತಮ್ಮ ಆಕರ್ಷಕ ಕಣ್ಣುಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಕಣ್ಣಾಮುಚ್ಚೆ ಕಾಡೇಗೂಡೇ ಎಂದ ಪದದೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿಯೇ ಅಂತಹ ಶಾಕ್ ಟ್ರೀಟ್‍ಮೆಂಟ್ ದೃಶ್ಯಗಳಿವೆ. ಇನ್ನು ಇಡೀ ಚಿತ್ರದಲ್ಲಿ ಹೇಗಿರಬಹುದು ಅನ್ನೋದು ಕುತೂಹಲ. 

ಹಾರರ್ ಚಿತ್ರ ಪ್ರೇಮಿಗಳು, ಆಗಾಗ್ಗೆ ತಾವು ಧೈರ್ಯವಂತರು ಎಂದು ಸಾಬೀತು ಪಡಿಸಿಕೊಳ್ಳಲು ಇಚ್ಚಿಸುವವರು.. ಆಕಾಶದಿಂದ ಧುತ್ತನೆ ಪ್ರತ್ಯಕ್ಷವಾಗುವ ರೂಪಿಕಾರನ್ನು ನೋಡಲು ಚಿತ್ರಮಂದಿರಕ್ಕೆ ಹೋಗಿ ಬನ್ನಿ.

16 Years To Majestic Gallery

Valentine Special Gallery