` ಕಾಲು ಕಳೆದುಕೊಂಡಿದ್ದ ಅಭಿಮಾನಿಗೆ ಧೈರ್ಯ ಹೇಳಿದ ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna meets his fan
Shivanna Meets His Fan

ಮನಸ್ಸಿದ್ದರೆ ಮಾರ್ಗ ಅನ್ನೋಕೆ ರಾಜ್‍ಕುಮಾರ್ ಉದಾಹರಣೆ ಮತ್ತು ಸ್ಫೂರ್ತಿ. ಸಾಧನೆಯ ಜೊತೆಗೆ ವಿನಯವೂ ಇರಬೇಕು ಅನ್ನೋದನ್ನ ರಾಜ್ ಕುಟುಂಬ ಸದಸ್ಯರು ಪಾಲಿಸುತ್ತಲೇ ಇದ್ದಾರೆ. ಅದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಶಿವರಾಜ್ ಕುಮಾರ್. 

ಮೈಸೂರಿನಲ್ಲಿ ಇತ್ತೀಚೆಗೆ ಕಂಡಕ್ಟರ್ ನಿರ್ಲಕ್ಷ್ಯದಿಂದಾಗಿ ಬಾಲಕ ಉಲ್ಲೇಖ್ ಕಾಲು ಕಳೆದುಕೊಂಡಿದ್ದ. ಉಲ್ಲೇಖ್ ಅಷ್ಟೇ ಅಲ್ಲ, ಆತನ ತಂದೆ ಪುಟ್ಟಸ್ವಾಮಿ ಕೂಡಾ ಡಾ.ರಾಜ್ ಅಭಿಮಾನಿ. 

ಕಾಲು ಕಳೆದುಕೊಂಡಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಉಲ್ಲೇಖ್ ಮನೆಗೆ ಶಿವರಾಜ್ ಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅದರೆ, ಅವರ ಮನೆಯಲ್ಲಿದ್ದಷ್ಟೂ ಹೊತ್ತು, ನೋವಿದ್ದರೂ ನಗುನಗುತ್ತಲೇ ಇದ್ದ ಪುಟ್ಟಸ್ವಾಮಿ ಕುಟುಂಬದವರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Raju Kannada Medium Movie Gallery

Choorikatte Movie Gallery