` ಕೈಲಿ ಸಿನಿಮಾ ಇಲ್ಲ.. ಏನ್ ಮಾತಾಡ್ಲಿ - ಸಂಯುಕ್ತಾ ಹೆಗ್ಡೆ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
samyuktha hegde
Samyuktha Busy In Workout

ನೀನಿರೇ.. ಸನಿಹ ನೀನಿರೆ.. ಎಂಬ ಹಾಡಿನ ಮೂಲಕವೇ ಕನ್ನಡ ಚಿತ್ರರಸಿಕರ ಮನಗೆದ್ದ ಸಂಯುಕ್ತಾ ಹೆಗ್ಡೆ, ಆನಂತರ ಸುದ್ದಿಯಾಗಿದ್ದು ಒಳ್ಳೆಯ ಕಾರಣಗಳಿಗಂತೂ ಅಲ್ಲವೇ ಅಲ್ಲ. ಕಾಲೇಜ್ ಕುಮಾರ ಚಿತ್ರವನ್ನು ಒಪ್ಪಿಕೊಂಡು, ನಿರಾಕರಿಸಿ, ಮತ್ತೆ ನಟಿಸಿದ ಸಂಯುಕ್ತಾ ಹೆಗ್ಡೆ, ಚಿತ್ರದ ಪ್ರಚಾರಕ್ಕೆ ಬರಲಿಲ್ಲ ಎಂದು ನಿರ್ಮಾಪಕರು ದೂರಿದ್ದರು. ಇನ್ನು ಬಿಗ್‍ಬಾಸ್ ಮನೆಯಲ್ಲಿ ಸಮೀರಾಚಾರ್ಯಗೆ ಕಪಾಳಮೋಕ್ಷ ಮಾಡಿದ ಪ್ರಕರಣವಂತೂ ದೊಡ್ಡ ವಿವಾದವನ್ನೇ ಸೃಷ್ಟಿಸಿಬಿಡ್ತು.

ಈ ಕುರಿತು ಕಿಚ್ಚ ಸುದೀಪ್ ಹಾಗೂ ಅಭಿಮಾನಿಗಳ ಕ್ಷಮೆಯಾಚಿಸಿದ ಸಂಯುಕ್ತಾ, ನಂತರ ಕೆಲವು ದಿನ ಶ್ರೀಲಂಕಾಗೆ ಹೋಗಿಬಿಟ್ಟರು. ಈಗ ಮತ್ತೆ ಬೆಂಗಳೂರಿನಲ್ಲಿಯೇ ಇರುವ ಸಂಯುಕ್ತಾ ಅವರ ಕೈಲಿ, ಈಗ ಯಾವ ಚಿತ್ರವೂ ಇಲ್ಲ. ದಿನದ ಬಹುಪಾಲು ಸಮಯವನ್ನು ವರ್ಕೌಟ್‍ನಲ್ಲೇ ಕಳೆಯುತ್ತಿರುವ ಸಂಯುಕ್ತಾ, ದೇಹವನ್ನು ಇನ್ನಷ್ಟು ಮತ್ತಷ್ಟು ಫಿಟ್ & ಫೈನ್ ಮಾಡಿಕೊಳ್ಳುತ್ತಿದ್ದಾರೆ. 

ನೃತ್ಯದಲ್ಲಿ ಸಾಕಷ್ಟು ಬೆವರು ಹರಿಸುತ್ತಿರುವ ಸಂಯುಕ್ತಾ ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ಫೋನ್‍ಗೆ ಸಿಕ್ಕಲ್ಲ. ಯಾರೇ ಫೋನ್ ಮಾಡಿದರೂ ಬಿಗ್‍ಬಾಸ್ ಘಟನೆ ಬಗ್ಗೆ ಕೇಳ್ತಾರೆ. ಹೀಗಾಗಿ ವಿವಾದಗಳಿಂದ ದೂರ ಉಳಿಯೋಕೆ ಬಯಸಿದ್ದೇನೆ. ಹೀಗಾಗಿ ಫೋನ್‍ನ್ನೂ ದೂರವಿಟ್ಟಿದ್ದೇನೆ ಎನ್ನುತ್ತಾರೆ ಸಂಯುಕ್ತಾ.

Raju Kannada Medium Movie Gallery

Choorikatte Movie Gallery