` ವಿಮಾನದಲ್ಲಿ ಕನ್ನಡ - ಜನ ಮೆಚ್ಚಿದ ಚಿತ್ರಗಳು ಯಾವುವು? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
most watched kannada movies in aeroplane
Kannada Movies In Aeroplane

ಮೊದ ಮೊದಲು ವಿಮಾನಗಳಲ್ಲಿ ಕನ್ನಡ ಸಿನಿಮಾಗಳೇ ಇರಲಿಲ್ಲ. ಬೆಂಗಳೂರಿನಿಂದ ಹೊರಡುವ ವಿಮಾನಗಳಲ್ಲಿಯೂ ತಮಿಳು, ತೆಲುಗು ಸಿಮಾಗಳಿರುತ್ತಿದ್ದವೇ ಹೊರತು, ಕನ್ನಡ ಇರಲಿಲ್ಲ. ಕನ್ನಡಿಗರ ಹೋರಾಟದಿಂದ ಇತ್ತೀಚೆಗೆ ವಿಮಾನಗಳಲ್ಲಿಯೂ ಕನ್ನಡ ಸಿನಿಮಾಗಳು ನೋಡಲು ಸಿಗುತ್ತಿವೆ. ಹೀಗೆ ವಿಮಾನಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳಲ್ಲಿ ಜನ ಮೆಚ್ಚಿದ ಸಿನಿಮಾಗಳು ಯಾವುವು ಎಂಬುದನ್ನು ಎಮಿರೇಟ್ಸ್ ಇಂಟರ್‍ನ್ಯಾಷನಲ್ ಪಟ್ಟಿ ಮಾಡಿದೆ.

ವಿಮಾನಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳಲ್ಲಿ ರಾಜಕುಮಾರ ಮತ್ತು ಶ್ರೀಕಂಠ ಚಿತ್ರಗಳು ಭಾರಿ ಜನ ಮೆಚ್ಚುಗೆ ಗಳಿಸಿವೆ. ಚೌಕ, ಒಂದು ಮೊಟ್ಟೆಯ ಕಥೆ ಕೂಡಾ ವಿಮಾನಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿವೆ. ವಿಮಾನಗಳಲ್ಲಿಯೂ ಕನ್ನಡ ಚಿತ್ರ ಪ್ರದರ್ಶನ ಇನ್ನಷ್ಟು ಹೆಚ್ಚಿದರೆ ಕನ್ನಡದ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಹಾರುವುದರಲ್ಲಿ ಅನುಮಾನವಿಲ್ಲ.

Raju Kannada Medium Movie Gallery

Choorikatte Movie Gallery