` ರವಿಚಂದ್ರನ್ ಕೃಷ್ಣನಾ.. ಕೊಳಲಿನಾ.. ಕರೆ... - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra image
Ravichandran Image from Kurukshetra

ಕೃಷ್ಣನೆಂದರೆ ಏನೇನೆಲ್ಲ ನೆನಪಾಗುತ್ತೆ ಹೇಳಿ.. ಏನಿಲ್ಲವೆಂದರೂ ಕೃಷ್ಣನ ತುಂಟಾಟಗಳು ನೆನಪಾಗಿಯೇ ಆಗುತ್ತವೆ. ಅದರಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ರವಿಚಂದ್ರನ್ ಬಂದುಬಿಟ್ಟರೆ, ಅಬ್ಬಾ.. ಮುಂದಿನದ್ದು ಹೇಳೋದೇ ಬೇಡ. ಮೊದಲೇ ರಸಿಕರ ರಸಿಕ ರವಿಚಂದ್ರನ್.

ರಣಧೀರನಾಗಿಯೂ ಕೊಳಲು, ರಸಿಕನಾಗಿಯೂ ಕೊಳಲು, ಕೊಳಲಿಗೆ ರಾಯಭಾರಿ, ಕುರುಕ್ಷೇತ್ರದ ರೂವಾರಿ ಎಂದೆಲ್ಲ ಹೊಗಳಿಬಿಟ್ಟಿದ್ದಾರೆ ನಿರ್ದೇಶಕ ರಘುರಾಮ್. ಪುತ್ರ ಮನೋರಂಜನ್ ಶ್ರೀಕೃಷ್ಣನ ವೇಷದಲ್ಲಿರುವ ನನ್ನ ತಂದೆ ದೇವರು ಎಂದು ಭಕ್ತಿಯಿಂದಲೇ ಹೇಳಿಕೊಂಡಿದ್ದಾರೆ.

30+ ವರ್ಷಗಳ ಚಿತ್ರಜೀವನದಲ್ಲಿ ಇದೆ ಮೊದಲ ಬಾರಿ ಮೀಸೆಯನ್ನೂ ತೆಗೆದು ನಟಿಸಿರುವ ರವಿಚಂದ್ರನ್, ಮೈಮೇಲಿನ ಕೂದಲನ್ನೆಲ್ಲ ತೆಗೆದಿದ್ದರು. ಈಗ ರವಿಚಂದ್ರನ್ ಅವರ ಫೋಟೋ ನಿಮ್ಮ ಕಣ್ಣ ಮುಂದಿದೆ. ಹೇಗಿದ್ದಾರೆ ರವಿಚಂದ್ರನ್..? ಅಲ್ಲಲ್ಲ.. ಹೇಗಿದ್ದಾರೆ ಶ್ರೀಕೃಷ್ಣ..?

Raju Kannada Medium Movie Gallery

Choorikatte Movie Gallery