` ಸೋಲನ್ನು ಗೆಲ್ಲುವುದು ಹೇಗೆ..? - ಬೃಹಸ್ಪತಿಯಲ್ಲಿದೆ ಸಂದೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
brihaspathi is a lesson to youth
Manoranjan In Brihaspathi

ಬೃಹಸ್ಪತಿ, ಮನೋರಂಜನ್ ರವಿಚಂದ್ರನ್ ಅಭಿನಯದ ಈ ಸಿನಿಮಾ ಯಾರಿಗಾಗಿ..? ಚಿತ್ರದಲ್ಲಿ ಅಂತಹುದ್ದೇನಿದೆ..? ಹೀಗೆ ಕೇಳುವವರಿಗೆ ಚಿತ್ರದಲ್ಲೊಂದು ಅದ್ಭುತ ಸಂದೇಶವಿದೆ ಎಂಬ ಉತ್ತರ ಸಿಗುತ್ತೆ. ನಂದಕಿಶೋರ್ ನಿರ್ದೇಶನದ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. 

ಕಷ್ಟ ಪಟ್ಟು ದುಡಿಯಬೇಕಾದ ಹೊತ್ತಿನಲ್ಲಿ ದಾರಿ ತಪ್ಪಿದ ಯುವಕರು, ಮತ್ತೆ ಗೆಲುವನ್ನೇ ಮರೆತುಬಿಡುತ್ತಾರೆ. ಒಂದು ಸಣ್ಣ ಗೆಲುವಿಗಾಗಿ ಏನೇನೆಲ್ಲ ಸರ್ಕಸ್ ಮಾಡುತ್ತಾರೆ. ಎಷ್ಟೋ ಬಾರಿ, ನಮ್ಮ ಹಣೆಬರಹವೇ ಇಷ್ಟು ಬಿಡ್ರಿ ಎಂದುಕೊಂಡು ಸುಮ್ಮನಾಗಿಬಿಡ್ತಾರೆ. ತಾವು ಮೊದಲು ಮಾಡಿದ್ದ ತಪ್ಪುಗಳಿಗೆ ತಮ್ಮನ್ನೇ ಹಳಿದುಕೊಳ್ಳುತ್ತಾ, ಹಳೆಯ ಗಾಯಗಳನ್ನೇ ಪದೇ ಪದೇ ಕೆರೆದುಕೊಳ್ಳುತ್ತಾ ಕಣ್ಣೀರಿಡುತ್ತಲೇ ಬದುಕಿಬಿಡುತ್ತಾರೆ.

ಬೃಹಸ್ಪತಿಯಲ್ಲಿರುವುದು ಅಂಥಾ ಯುವಕನ ಕಥೆ. ತಪ್ಪುಗಳನ್ನು ಮರೆತು, ಗೆಲುವಿನ ಹಾದಿಯಲ್ಲಿ ಮುನ್ನುಗ್ಗುವ ಬೃಹಸ್ಪತಿಯ ಕಥೆ. ಸೋಲನ್ನೇ ಸೋಪಾನ ಮಾಡಿಕೊಂಡಿರುವ, ಹತಾಶೆಯನ್ನೇ ಹಾಸಿಗೆ ಮಾಡಿಕೊಂಡಿರುವ, ಹಳಹಳಿಸುವುದನ್ನೇ ಜೀವನ ಮಾಡಿಕೊಂಡಿರುವವರು.. ಮತ್ತೆ ಗೆಲುವಿನತ್ತ ಮುನ್ನುಗ್ಗುವ ಕಸನು ಬಿತ್ತಲಿದೆಯಂತೆ ಈ ಸಿನಿಮಾ. ಗೆಲುವಿಗಾಗಿ ಹಪಹಪಿಸುವ ಯುವಕರಿಗೆ ಈ ಚಿತ್ರ ಸ್ಫೂರ್ತಿ ನೀಡಲಿ ಎಂಬ ಕನಸು ರಾಕ್‍ಲೈನ್ ವೆಂಕಟೇಶ್, ನಂದಕಿಶೋರ್, ಮನೋರಂಜನ್ ಅವರಿಗೂ ಇದೆ.

Raju Kannada Medium Movie Gallery

Choorikatte Movie Gallery