` ಶಂಕರ್ ಅಶ್ವತ್ಥ್‍ಗೆ ಪ್ರಥಮ್ ನೆರವು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pratham helps ks ashwath's son
Shankar Ashwath, Pratham Image

ಹಿರಿಯ ಕಲಾವಿದ ಕೆ.ಎಸ್.ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಕ್ಯಾಬ್ ಓಡಿಸುತ್ತಿರುವ ಸುದ್ದಿ ಗೊತ್ತಾಗಿದ್ದೇ ತಡ, ಹಲವರು ಶಂಕರ್ ಅಶ್ವತ್ಥ್ ನೆರವಿಗೆ ಧಾವಿಸಿದ್ದಾರೆ. ಪ್ರಥಮ್ ಅಭಿನಯದ ಬಿಲ್ಡಪ್ ಚಿತ್ರದಲ್ಲೊಂದು ಅವಕಾಶ ಕೊಟ್ಟಿದ್ದಾರೆ. 

ಶಂಕರ್ ಅಶ್ವತ್ಥ್ ಅವರ ಮನೆಗೆ ಭೇಟಿ ಕೊಟ್ಟ ಪ್ರಥಮ್, ತಮ್ಮ ಬಿಲ್ಡಪ್ ಚಿತ್ರದಲ್ಲಿ ಪಾತ್ರವೊಂದರಲ್ಲಿ ನಟಿಸಲು ಆಹ್ವಾನ ನೀಡಿದ್ದಾರೆ. ಅದು ಶಂಕರ್ ಅಶ್ವತ್ಥ್ ಅವರಿಗೆ ಸೂಕ್ತವಾದ ಪಾತ್ರವಿದೆ ಎಂದು ಹೇಳಿರುವ ಪ್ರಥಮ್, ಅಡ್ವಾನ್ಸ್ ಚೆಕ್‍ನ್ನೂ ನೀಡಿದ್ದಾರೆ.

ನಾನು ಶಂಕರ್ ಸರ್‍ಗೆ ನೆರವು ನೀಡಲು ಬಂದಿಲ್ಲ. ಅವರ ಸ್ವಾಭಿಮಾನದ ಬದುಕಿನ ಬಗ್ಗೆ ನನಗೆ ಗೌರವವಿದೆ. ನಾನು ನನ್ನ ಚಿತ್ರಕ್ಕೆ ಡೇಟ್ಸ್ ಕೇಳಲು ಬಂದಿದ್ದೇನೆ. ಶಂಕರ್ ಅಶ್ವತ್ಥ್ ಅವರು ಒಪ್ಪಿಕೊಂಡಿದ್ದಾರೆ. ಇದು ನಾನು ಅವರಿಗೆ ನೀಡುತ್ತಿರುವ ಸಹಾಯ ಅಲ್ಲ ಎಂದರು ಪ್ರಥಮ್.

ಸ್ವಾಭಿಮಾನಿ ಕಲಾವಿದನ ಬಗ್ಗೆ ನೆರವು ನೀಡುವಾಗ ಪ್ರಥಮ್ ತೋರಿಸಿದ ಕಾಳಜಿ ಮೆಚ್ಚುವಂಥದ್ದೇ.

Raju Kannada Medium Movie Gallery

Choorikatte Movie Gallery