` ನಾನು ಐಶ್ವರ್ಯ ರೈ ಮಗ ಎಂದ ಹುಡುಗನ ರಿಯಲ್ ಸ್ಟೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
story behind aishwarya rai son
Aishwarya Rai, Sangeeth Kumar Rai Image

ಐಶ್ವರ್ಯ ರೈ, ಕನ್ನಡತಿಯಾದರೂ ಮಿಂಚುತ್ತಿರುವುದು ಬಾಲಿವುಡ್‍ನಲ್ಲಿ. ಮಾಜಿ ವಿಶ್ವಸುಂದರಿ. ಬಾಲಿವುಡ್ ಸೂಪರ್ ಸ್ಟಾರಿಣಿ. ಬಚ್ಚನ್ ಕುಟುಂಬದ ಸೊಸೆ.. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್‍ಗೆ ಇರುವುದು ಒಬ್ಬಳೇ ಮಗಳು. ಆರಾಧ್ಯ.

ಇತ್ತೀಚೆಗೆ ಮಂಗಳೂರಿನಲ್ಲೊಬ್ಬ ಯುವಕ, ನಾನು ಕೂಡಾ ಐಶ್ವರ್ಯಾ ರೈ ಅವರ ಮಗ ಎಂದು ಹೇಳಿಕೊಂಡಿದ್ದ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಆ ಯುವಕನ ಹೆಸರು, ಸಂಗೀತ್ ಕುಮಾರ್ ರೈ. ಅವನಿಗೆ 29 ವರ್ಷ. ಅವನ ಲೆಕ್ಕವನ್ನೇ ನೋಡಿದರೆ, ಐಶ್ವರ್ಯಾ ರೈ 15 ವರ್ಷಕ್ಕೇ ತಾಯಿಯಾಗಿರಬೇಕು.

ಆತ ಹೇಳುತ್ತಿರುವುದು ಕಟ್ಟುಕಥೆ ಎಂದು ಮೇಲ್ನೋಟಕ್ಕೇ ಗೊತ್ತಾದರೂ, ಏಕೆ ಹೀಗೆ ಎಂದು ಬೆನ್ನು ಹತ್ತಿದಾಗ ನಿಜ ಸಂಗತಿ ಗೊತ್ತಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಕೊಡಿಸುತ್ತಿದ್ದೇವೆ. ದಯವಿಟ್ಟು ಆತನಿಗೆ ಪ್ರಚಾರ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಆತನ ತಂದೆ. 

Raju Kannada Medium Movie Gallery

Choorikatte Movie Gallery