` ರಿಲೀಸ್‍ಗೂ ಮೊದಲೇ ದುರ್ಯೋಧನನ ಕಟೌಟ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
duryodhana cut out ready before release
Duryodhana CutOut

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿದ್ದಾರಲ್ಲ..ಅವರ ಅಭಿಮಾನಕ್ಕೆ ಮಿತಿಯೇ ಇಲ್ಲ. ಅದು ಈ ಬಾರಿಯೂ ಸಾಬೀತಾಗಿದೆ. ದರ್ಶನ್ ಅಭಿಮಾನಿಗಳು ದರ್ಶನ್ ಅವರನ್ನು ಕರೆಯೋದು ಡಿ ಬಾಸ್ ಅಂತಾನೇ. ತಮ್ಮ ಡಿ ಬಾಸ್‍ರ ದುರ್ಯೋಧನನ ಕಟೌಟ್ ಹಾಕಿಸಿ ಸಂಭ್ರಮಿಸಿದ್ದಾರೆ ಡಿ ಬಾಸ್ ಫ್ಯಾನ್ಸ್. ಚಿತ್ರ ರಿಲೀಸ್ ಆಗುವುದಕ್ಕೂ ತಿಂಗಳುಗಳ ಮೊದಲೇ ಕಟೌಟ್ ಹಾಕಿಸಿರುವುದು ವಿಶೇಷ.

ಮೈಸೂರಿನಲ್ಲಿ ಚಾಮುಂಡೇಶ್ವರಿ ಯುವಕರ ಬಳಗದಿಂದ ಇತ್ತೀಚೆಗೆ ರಾಜ್ಯೋತ್ಸವ ಆಚರಿಸಲಾಗಿತ್ತು. ಅತಿಥಿಯಾಗಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ವೇದಿಕೆಯಲ್ಲಿ ದರ್ಶನ್ ಅವರ ಕಟೌಟ್‍ವೊಂದನ್ನು ಹಾಕಿ ಸ್ವಾಗತಿಸಿದರು ಅಭಿಮಾನಿಗಳು. ಸಾಮಾನ್ಯವಾಗಿ ಚಿತ್ರ ರಿಲೀಸ್ ವೇಳೆ ಹಾಕುವ ಕಟೌಟ್‍ನ್ನು ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ಹಾಕಿಸಿಕೊಂಡ ನಟ ದರ್ಶನ್.

 

Raju Kannada Medium Movie Gallery

Choorikatte Movie Gallery