` ಕಥೆಯಲ್ಲೇ ಇದೆ ಚಮಕ್ ಥ್ರಿಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
producer liked chamak's story
Producer Chandrashekar, Chamak Image

ಚಮಕ್ ಚಿತ್ರ, ಪ್ರೇಕ್ಷಕರಿಗೆ ಚಮಕ್ ಕೊಡೋಕೆ ರೆಡಿಯಾಗಿ ನಿಂತಿದೆ. ಚಮಕ್ ಕೊಡೋರ್ಯಾರು..? ಗಣೇಶ್‍ಗೆ ರಶ್ಮಿಕಾ ಕೊಡ್ತಾರಾ..? ರಶ್ಮಿಕಾಗೆ ಗಣೇಶ್ ಕೊಡ್ತಾರಾ..? ಗೊತ್ತಾಗೋದು ಶುಕ್ರವಾರ. ಸುನಿಯವರಂತೂ ಚಮಕ್ ಕೊಟ್ಟಾಗಿದೆ. ಆದ್ರೆ ಸುನಿ ನಿಜಕ್ಕೂ ಮೊದಲು ಚಮಕ್ ಕೊಟ್ಟಿದ್ದು ಚಿತ್ರದ ನಿರ್ಮಾಪಕರಿಗೆ. 

ಚಿತ್ರದ ನಿರ್ಮಾಪಕ ಚಂದ್ರಶೇಖರ್, ಉದ್ಯಮಿಯಷ್ಠೇ ಅಲ್ಲ, ಸಾಹಿತ್ಯ, ಸಂಘಟನೆಗಳಲ್ಲೂ ಸಕ್ರಿಯರಾಗಿರುವವರು. ಚಂದ್ರಶೇಖರ್ ಅವರಿಗೆ ಮೊದಲು ಇಷ್ಟವಾಗಿದ್ದೇ ಚಿತ್ರದ ಕಥೆ. ಚಿತ್ರದ ಕಥೆ ಹೇಗಿತ್ತೋ.. ಅದನ್ನು ಅಷ್ಟೇ ಚೆಂದವಾಗಿ ತೆರೆಯ ಮೇಲೆ ತಂದಿದ್ದಾರಂತೆ ಸುನಿ. ಅದನ್ನು ಪ್ರೀತಿಯಿಂದ ಹೇಳಿಕೊಳ್ಳುವ ಚಂದ್ರಶೇಖರ್, ಇದು ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಬಣ್ಣಿಸುತ್ತಾರೆ. 

ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಪರಭಾಷೆಯ ಗಾಯಕರ ಕೈಲಿ ಹಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಈ ಚಿತ್ರದಲ್ಲಿ ಅದನ್ನು ಮುರಿದಿದ್ದಾರೆ ಚಂದ್ರಶೇಖರ್. ಚಿತ್ರದ ಎಲ್ಲ ಹಾಡುಗಳನ್ನು ಕನ್ನಡದವರಿಂದಲೇ ಹಾಡಿಸಿದ್ದಾರೆ. ಚಿತ್ರದಲ್ಲಿ ಪರಭಾಷಿಕರಿಲ್ಲ ಎನ್ನುವುದು ವಿಶೇಷ.

ಉತ್ತಮ ಮನರಂಜನೆ, ಉತ್ತಮ ಸಂದೇಶ ಎರಡೂ ಇರುವ ಚಮಕ್, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗಲಿದೆ ಎನ್ನುವುದು ನಿರ್ಮಾಪಕರ ವಿಶ್ವಾಸ.

Raju Kannada Medium Movie Gallery

Choorikatte Movie Gallery