` ನಾನು ಮದುವೆ ಆಗಬೇಕು.. ನನಗೂ ಒಬ್ಬ ಹುಡುಗ ಬೇಕು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shubha ounja ready to marry
Shubha Punja Image

ನನಗೂ ಒಬ್ಬ ಗೆಳೆಯ ಬೇಕು ಎಂದು ಹಾಡುತ್ತಲೇ ಕನ್ನಡಿಗರ ಮೊಗ್ಗಿನ ಮನಸ್ಸಿನಲ್ಲಿ ಹೂವಾಗಿ ಅರಳಿದ್ದವರು ಶುಭಾ ಪೂಂಜಾ. ಈಗ ಮದುವೆಗೆ ಸಿದ್ಧವಾಗಿದ್ದಾರೆ. ಸಿನಿಮಾದಲ್ಲಿ ಅಲ್ಲ. ನಿಜ ಜೀವನದಲ್ಲಿ ಮದುವೆಯಾಗಲು ಸಿದ್ಧವಾಗಿದ್ದಾರೆ. 2018ಕ್ಕೆ ಮದುವೆಯಾಗಬೇಕು ಅನ್ನೋದು ಶುಭಾ ಅವರ ಯೋಜನೆ.

ಅವರಿಗೆ ತೀರಾ ಅವರು ಮೊಗ್ಗಿನ ಮನಸ್ಸಿನಲ್ಲಿ ಹಾಡಿದಂತಹ ಹುಡುಗನೇ ಬೇಕಿಲ್ಲ. ಪ್ರಾಣಿಗಳನ್ನು ಪ್ರೀತಿಸುವ ಗುಣವುಳ್ಳ, ಮಹತ್ವಾಕಾಂಕ್ಷೆಗಳೇನೂ ಇರದ, ಸ್ವಲ್ಪ ಗೋಧಿಬಣ್ಣದ ಮೈಕಟ್ಟು ಹೊಂದಿರುವ ಒಳ್ಳೆಯ ಮನುಷ್ಯನಾಗಿರುವ ಹುಡುಗ ಬೇಕು.

ಈ ಅರ್ಹತೆಗಳಿರುವ ಹುಡುಗ ನೀವಾಗಿದ್ದರೆ.. ಅಥವಾ ನಿಮ್ಮ ಕಣ್ಣಿಗೆ ಬಿದ್ದರೆ, ಶುಭಾ ಅವರಿಗೆ ತೋರಿಸಿ. ಹೇಳಿ.. ಮದುವೆ ಮಾಡಿಸಿಬಿಡಿ.

Raju Kannada Medium Movie Gallery

Choorikatte Movie Gallery