` ಫಸ್ಟ್ ಕ್ಲಾಸ್ ಪೊರ್ಕಿ ಎಂದು ಕರೆದವರ ಜೊತೆ ಜಗ್ಗೇಶ್ ಸಂಭ್ರಮಾಚರಣೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh's celebrations
Jaggesh, Parimala Image

ನಿಮ್ಮನ್ನ ಯಾರಾದರೂ ಪೊರ್ಕಿ ಎಂದು ಕರೆದರೆ ಏನು ಮಾಡ್ತೀರಿ..? ರಟ್ಟೆಯಲ್ಲಿ ಬಲವಿದ್ದರೆ, ಹಾಗೆಂದವನಿಗೆ ತದುಕುತ್ತೀರಿ. ಬಾಯಲ್ಲಿ ಬಲವಿದ್ದರೆ ಬೈತೀರಿ. ಆದರೆ, ನವರಸ ನಾಯಕ ಜಗ್ಗೇಶ್ ಡಿಫರೆಂಟು. ತಮಗೆ ಫಸ್ಟ್ ಕ್ಲಾಸ್ ಪೊರ್ಕಿ ಎಂದು ಬಿರುದು ನೀಡಿದ್ದವರ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ. ಅವರ ತಂದೆಯ ಹುಟ್ಟುಹಬ್ಬದ ದಿನವನ್ನು ಸಂಭ್ರಮಿಸಿದ್ದಾರೆ.

ಕನ್‍ಫ್ಯೂಸ್ ಆಗಬೇಡಿ. ಇದೊಂಥರಾ `ಗಡ್ಡ ಎಳೆದವನಿಗೆ ಮಿಠಾಯಿ' ಕಥೆಯಂಥದ್ದು. ಜಗ್ಗೇಶ್‍ಗೆ ಫಸ್ಟ್ ಕ್ಲಾಸ್ ಪೊರ್ಕಿ ಎಂದು ಬಿರುದು ನೀಡಿದ್ದವರು ಬೇರ್ಯಾರೂ ಅಲ್ಲ. ಅವರ ಪ್ರೀತಿಯ ಪತ್ನಿ ಪರಿಮಳ ಅವರ ತಮ್ಮ ಸುಂದರ್. ಪರಿಮಳ ಅವರನ್ನು ನೋಡಲು ಅವರ ಮನೆ ಕಡೆ ಹೋಗಿದ್ದಾಗ, ಸುಂದರ್, ಅವರ ಅಪ್ಪನಿಗೆ ಅಪ್ಪ.. ನೋಡು.. ಅಕ್ಕನ್ನ ನೋಡೋಕೆ ಫಸ್ಟ್ ಕ್ಲಾಸ್ ಪೊರ್ಕಿ ಬಂದಿದ್ದಾನೆ ಎಂದು ಕಿರುಚಿ ಹೇಳುತ್ತಿದ್ದನಂತೆ.

ಪರಿಮಳ ಅವರ ತಂದೆಯ 82ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿರುವ ಜಗ್ಗೇಶ್, ತಮ್ಮ ಬಾಮೈದನ ಹಳೆಯ ಕತೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅದ್ಸರಿ, ಜಗ್ಗೇಶ್ ಈಗ ಫಸ್ಟ್ ಕ್ಲಾಸ್ ಕಲಾವಿದ ಅನ್ನೋದೇನೋ ಖರೆ.. ಆಗ..

 

Raju Kannada Medium Movie Gallery

Choorikatte Movie Gallery