` ಉಪ್ಪಿ ಪಕ್ಷದ ಪಾರದರ್ಶಕ ಪ್ರಣಾಳಿಕೆ ಬಂತು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
uppi is kpjp manifesto
Upendra Image

ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ, ರಾಜಕೀಯಕ್ಕೆ ಬಂದಿರೋದು ಹಳೆಯ ವಿಷಯ. ಈUವರು ತಮ್ಮದೇ ಪಕ್ಷದ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಇದು ಉಪೇಂದ್ರ ಅವರ ಪಕ್ಷದ ಪ್ರಣಾಳಿಕೆಯ ಮೊದಲ ಕಂತು.

ಸಂಪೂರ್ಣ ಪಾರದರ್ಶಕ ಆಡಳಿತದ ಭರವಸೆ ಕೊಟ್ಟಿರುವ ಉಪೇಂದ್ರ, ಸರ್ಕಾರದ ಪ್ರತಿಯೊಂದು ನಡೆಯನ್ನೂ ಜನರ ಮುಂದಿಡುವ ಭರವಸೆ ಕೊಟ್ಟಿದ್ದಾರೆ. ಪಾರದರ್ಶಕ ಆಡಳಿತ, ಜನಪ್ರತಿನಿಧಿಗಳ ಕಡ್ಡಾಯ ಹಾಜರಾತಿ, ಟೆಂಡರ್, ಅಧಿಕಾರಿಗಳ ಸಭೆಯ ಬಗ್ಗೆ ಸರ್ಕಾರದ ಸುದ್ದಿವಾಹಿನಿಯಿಂದ ನೇರ ಪ್ರಸಾರ, ಸರ್ಕಾರದ ಪ್ರತಿ ಯೋಜನೆಯ ವಿವರವನ್ನೂ ನೀಡುವ ಆ್ಯಪ್, ಸರ್ಕಾರಿ ನೌಕರರಿಗೆ ಸಮವಸ್ತ್ರ, ಬ್ಯಾಡ್ಜ್.. ಹೀಗೆ ಹಲವು ಭರವಸೆ ಕೊಟ್ಟಿದ್ದಾರೆ.

ಪ್ರಣಾಳಿಕೆಯಲ್ಲಿ ಅತ್ಯಂತ ವಿಶೇಷ ಎನಿಸಿರುವುದು ಸರ್ಕಾರದ ಪ್ರತಿ ಸಭೆ, ಟೆಂಡರ್ ಪ್ರಕ್ರಿಯೆಗಳನ್ನೂ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡುವ ಯೋಜನೆ. ಸರ್ಕಾರದ ಪ್ರತಿಯೊಂದು ನಡೆಯೂ ಸಾರ್ವಜನಿಕರಿಗೆ ತಲುಪಬೇಕು, ಮುಚ್ಚಿಡುವಂಥದ್ದಿರಬಾರದು ಎಂಬ ಹಿನ್ನೆಲೆಯಲ್ಲಿ ಈ ಪ್ರಣಾಳಿಕೆ ರೂಪಿಸಿದ್ದಾರೆ.

ಇಂತಹ ಇನ್ನೂ ಕೆಲವು ಪ್ರಣಾಳಿಕೆಗಳು ಬರಲಿವೆ. ಉಪೇಂದ್ರ ಅವರ ಪಕ್ಷದ ಪ್ರಣಾಳಿಕೆಗೆ ನೀವು ಕೂಡಾ ಸಲಹೆ ನೀಡಬಹುದು.

Raju Kannada Medium Movie Gallery

Choorikatte Movie Gallery