` ಕಲ್ಯಾಣ್ ಕುಮಾರ್ ಪತ್ನಿ ರೇವತಿ ಕಲ್ಯಾಣ್​ ಕುಮಾರ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kalyan kumar wife revathi no more
Revathi Kalyan Kumar Image

ನಟಶೇಖರ ಎಂದೇ ಖ್ಯಾತರಾಗಿದ್ದ ಕಲ್ಯಾಣ್ ಕುಮಾರ್ ಅವರ ಪತ್ನಿ 'ರೇವತಿ ಕಲ್ಯಾಣ್ ಕುಮಾರ್ ನಿಧನರಾಗಿದ್ದಾರೆ. ಚೆನ್ನೈನಲ್ಲಿ ವಾಸವಾಗಿದ್ದ ರೇವತಿ, ಬೆಳಗಿನ ಜಾವ ಎರಡು ಗಂಟೆಗೆ ಮೃತಪಟ್ಟಿದ್ದಾರೆ.

ವಿಠಲಾಚಾರ್ಯರು ನಿರ್ಮಿಸಿದ 'ರಾಜಲಕ್ಷ್ಮಿ' ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ರೇವತಿ, ರೇವತಿ ಚಿಕ್ಕದಿಂದಲೇ ಬಣ್ಣದ ಲೋಕದಲ್ಲಿದ್ದವರು. 'ಮನೆಗೆ ಬಂದ ಮಹಾಲಕ್ಷ್ಮಿ, 'ಎಂದೂ ನಿನ್ನವನೆ', 'ಕಲ್ಲು ಸಕ್ಕರೆ', 'ಪ್ರವಾಸಿ ಮಂದಿರ'  ಮೊದಲಾದ ಚಿತ್ರಗಳ ನಿರ್ಮಾಪಕಿಯೂ ಆಗಿದ್ದ ರೇವತಿ ಕಲ್ಯಾಣ್ ಕುಮಾರ್, ಬರಹಗಾರ್ತಿಯೂ ಆಗಿದ್ದರು. 

ಕೆಲವು ಚಿತ್ರಗಳಿಗೆ ಹಾಡು, ಸಂಭಾಷಣೆಯನ್ನೂ ಬರೆದಿದ್ದರು. ಕಥೆ, ಕಾದಂಬರಿಗಳನ್ನೂ ಬರೆದಿದ್ದ ರೇವತಿ ಕಲ್ಯಾಣ್ ಕುಮಾರ್, ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ನಾಳೆ (ಡಿ.25)ಬೆಳಿಗ್ಗೆ ಚೆನ್ನೈನ ವಿಜಯ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

Raju Kannada Medium Movie Gallery

Choorikatte Movie Gallery