` ಮಸಾಜ್ ಮಸಾಲಾಗೆ ಟ್ವಿಸ್ಟ್ - ಸಾಧು, ಮಂಡ್ಯ ರಮೇಶ್ ಅಲ್ಲಿಗೆ ಹೋಗೇ ಇಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
massage masala twist
Mandya Ramesh, Sadhu Kokila Image

ಮೈಸೂರ ಮಸಾಜ್ ಪಾರ್ಲರ್ ವಿವಾದಕ್ಕೆ ವಿಭಿನ್ನ ತಿರುವು ಸಿಕ್ಕಿದೆ. ಮಸಾಜ್ ಪಾರ್ಲರ್‍ಗೆ ಸಾಧು ಕೋಕಿಲಾ ಹಾಗೂ ಮಂಡ್ಯ ರಮೇಶ್ ಬರುತ್ತಿದ್ದರು. ನನಗೆ ಲೈಂಗಿಕವಾಗಿ ಹಿಂಸಿಸುತ್ತಿದ್ದರು ಎಂದು ಯುವತಿಯೊಬ್ಬರು ಆರೋಪ ಮಾಡಿದ್ದು ಚಿತ್ರರಂಗದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಜಗ್ಗೇಶ್, ಭಾವನಾ ಸೇರಿದಂತೆ ಹಲವು ಚಿತ್ರನಟರು ನಟರ ಬೆಂಬಲಕ್ಕೆ ನಿಂತಿದ್ದರು.

ಈಗ ಅದೇ ಮಸಾಜ್ ಪಾರ್ಲರ್ ಮಾಲೀಕ ರಾಜೇಶ್‍ರ ಪತ್ನಿ ಸವಿತಾ, ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಮ್ಮ ಸಲೂನ್ ಉದ್ಘಾಟಿಸಿದ್ದವರು ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್. ಆದರೆ, ಉದ್ಘಾಟನೆ ಮಾಡಿ ಹೋದವರು, ಮತ್ತೆ ಇಲ್ಲಿಗೆ ಬಂದೇ ಇಲ್ಲ. ಬೇಕಾದರೆ ಸಿಸಿಟಿವಿಗಳನ್ನು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ ಸವಿತಾ.

ಇನ್ನು ಈ ಸಲೂನ್ ಆರಂಭಿಸಿರುವುದೇ 3 ತಿಂಗಳ ಹಿಂದೆ. ವ್ಯವಹಾರ ಕೂಡಾ ಇನ್ನೂ ಕಷ್ಟದಲ್ಲಿದೆ. ನಾವೇ 2 ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಹೀಗಿರುವಾಗ ಇಂತಹ ಆರೋಪ ಸರಿಯಲ್ಲ ಎಂದಿದ್ದಾರೆ ಸವಿತಾ. ಸಂತ್ರಸ್ತೆ ಎಂದು ಹೇಳಿಕೊಳ್ಳುತ್ತಿರುವ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಕೊಡುವುದಿಲ್ಲ ಎಂದಾಗ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ ಸವಿತಾ.

ಇನ್ನು ಆ ಸಲೂನ್‍ನಲ್ಲಿ ಕಟಿಂಗ್, ಶೇವಿಂಗ್, ಫೇಸ್‍ವಾಶ್ ಬಿಟ್ಟು ಬೇರೇನೂ ಮಾಡಲ್ಲ. ಹೀಗಿರುವಾಗ ಮಸಾಜ್ ಎಲ್ಲಿಂದ ಮಾಡಿಸೋಣ ಅನ್ನೋದು ಸವಿತಾ ಅವರ ಪ್ರಶ್ನೆ. ಆ ಸಲೂನ್‍ನಲ್ಲಿ ಮಸಾಜ್ ಮಾಡುವಷ್ಟು ಜಾಗವೂ ಇಲ್ಲವಂತೆ. ಹಾಗಾದರೆ, ಸಂತ್ರಸ್ತೆ ಎನ್ನುತ್ತಿರುವ ಯುವತಿ ಆರೋಪಗಳೆಲ್ಲ ಸುಳ್ಳಾ..?

Related Articles :-

ಮಸಾಜ್ ಮಸಾಲಾ - ನಟರ ಬೆಂಬಲಕ್ಕೆ ಜಗ್ಗೇಶ್

ಮಸಾಜ್ ಮಸಾಲಾ ಆರೋಪ - ಸಾಧು ಹೇಳಿದ್ದೇನು..?

ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಮಂಡ್ಯ ರಮೇಶ್, ಸಾಧು ಕೋಕಿಲಾ ಹೆಸರು..!

Raju Kannada Medium Movie Gallery

Choorikatte Movie Gallery