` ಅಣ್ಣನ ಜೊತೆ ಒಟ್ಟಿಗೇ ಬರ್ತಾರೆ ಅಪ್ಪು, ಸಿದ್ಧರಾಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna appu together for live chat
Shivarajkumar, Puneeth Rajkumar Image

ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಎಷ್ಟೇ ದೊಡ್ಡ ಸ್ಟಾರ್ ಆದರೂ ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರಾನೇ. ಶಿವರಾಜ್ ಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಟ್ವಿಟರ್‍ನಲ್ಲಾಗಲೀ, ಫೇಸ್‍ಬುಕ್‍ನಲ್ಲಾಗಲೀ, ಇನ್‍ಸ್ಟಾಗ್ರಾಮ್‍ನಲ್ಲಾಗಲೀ ಇಲ್ಲ. ಪುನೀತ್ ಇದ್ದರೂ ಆಕ್ಟಿವ್ ಅಲ್ಲ. ಆದರೆ ಇದೇ ಮೊದಲ ಬಾರಿಗೆ ಅಣ್ಣನ ಜೊತೆ ಒಟ್ಟಿಗೇ ಫೇಸ್‍ಬುಕ್ ಲೈವ್‍ಗೆ ಬರುತ್ತಿದ್ದಾರೆ ಶಿವರಾಜ್ ಕುಮಾರ್ & ಪುನೀತ್ ರಾಜ್‍ಕುಮಾರ್.

ಪಿಆರ್‍ಕೆ ಆಡಿಯೋ ಕಂಪೆನಿ ಆರಂಭಿಸಿರುವ ಪುನೀತ್, ಅಂಜನೀಪುತ್ರದ ಹಾಡುಗಳನ್ನು ರಿಲೀಸ್ ಮಾಡಿದ್ದಾರೆ. ಈಗ, ಟಗರು ಚಿತ್ರದ ಆಡಿಯೋ ರೈಟ್ಸ್‍ನ್ನೂ ಪುನೀತ್ ಪಡೆದುಕೊಂಡಿದ್ದಾರೆ. ಟಗರು ಚಿತ್ರದ ಆಡಿಯೋ ಡಿ.23ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ಣ-ತಮ್ಮ ಇಬ್ಬರೂ ಒಟ್ಟಿಗೇ ಫೇಸ್‍ಬುಕ್ ಲೈವ್‍ಗೆ ಬರುತ್ತಿದ್ದಾರೆ.

ಇಂದು ರಾತ್ರಿ (ಡಿ.16) 8 ಗಂಟೆಗೆ ಪಿಆರ್‍ಕೆ ಆಡಿಯೋ ಅಫಿಷಿಯಲ್ ಫೇಸ್‍ಬುಕ್ ಪೇಜ್‍ನಲ್ಲಿ ಅಣ್ಣ-ತಮ್ಮ ಇಬ್ಬರೂ ಒಟ್ಟಿಗೇ ಸಿಗಲಿದ್ದಾರೆ. ಅಭಿಮಾನಿಗಳು ವೇಯ್ಟಿಂಗ್.

Raju Kannada Medium Movie Gallery

Choorikatte Movie Gallery