` ಸ್ಪರ್ಶ, ಮೆಜೆಸ್ಟಿಕ್ ರೇಖಾ ಈಗ `ಡೆಮೋಪೀಸ್' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sparsha rekha to produce dummypiece
Rekha Image

ಕನ್ನಡದ ಇಬ್ಬರು ಸ್ಟಾರ್‍ಗಳ ಆರಂಭದ ಚಿತ್ರಕ್ಕೆ ಹೀರೋಯಿನ್ ಆಗಿದ್ದವರು ರೇಖಾ. ಸುದೀಪ್ ಜೊತೆ ಸ್ಪರ್ಶ ಹಾಗೂ ದರ್ಶನ್ ಜೊತೆ ಮೆಜೆಸ್ಟಿಕ್ ಚಿತ್ರಗಳಲ್ಲಿ ಹೀರೋಯಿನ್ ಆಗಿದ್ದವರು. ಸ್ಪರ್ಶ ರೇಖಾ ಎಂದೇ ಖ್ಯಾತರಾದ ರೇಖಾ, ಆನಂತರ ಚಿತ್ರರಂಗದಿಂದ ದೂರವಾಗಿಬಿಟ್ಟರು. ರೇಖಾ ಮತ್ತೆ ಕಾಣಿಸಿಕೊಂಡಿದ್ದು ಕಳೆದ ವರ್ಷದ  ಬಿಗ್‍ಬಾಸ್‍ನಲ್ಲಿ. ಈಗ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ನಾಯಕಿಯಾಗಿ ಅಲ್ಲ, ನಿರ್ಮಾಪಕಿಯಾಗಿ.

ರೇಖಾ ನಿರ್ಮಿಸುತ್ತಿರುವ ಹೊಸ ಚಿತ್ರದ ಹೆಸರು ಡೆಮೋಪೀಸ್. ವಿವೇಕ್ ಎಂಬ ಹೊಸ ಹುಡುಗನಿಗೆ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ರೇಖಾ ಅವರ ಜೊತೆ ಹಲವು ಪ್ರಾಜೆಕ್ಟ್‍ಗಳಿಗೆ ಕೆಲಸ ಮಾಡಿದ ಅನುಭವ ವಿವೇಕ್ ಅವರಿಗೆ ಇದೆ. ವಿವೇಕ್ ಕಥೆ ಹೇಳಿದಾಗ ಕಥೆಯನ್ನ ಕೇವಲ ಇಷ್ಟಪಟ್ಟು ಸುಮ್ಮನಾಗದೆ, ನಿರ್ಮಾಪಕಿಯಾಗಿದ್ದು ನನಗೂ ಅಚ್ಚರಿಯ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ ವಿವೇಕ್.

ಕಾಮಿಡಿ ಕಥಾ ಹಂದರದ ಚಿತ್ರದಲ್ಲಿ ರೇಖಾ, ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಭರತ್ ಬೋಪಣ್ಣ ಹೀರೋ. ಪ್ರಿಯಾಂಕಾ ಮಲ್ನಾಡ್ ನಾಯಕಿ.

Raju Kannada Medium Movie Gallery

Choorikatte Movie Gallery