` ಲಹರಿ ವೇಲುಗೆ ಎಂಥ ಅವಾರ್ಡ್ ಬಂತು ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lahari velu gets prestigious award
Lahari Velu Image

ವೇಲು, ಹಾಗೆಂದರೆ ಯಾರು ಅನ್ನೋವ್ರು ಲಹರಿ ವೇಲು ಅಂದಕೂಡ್ಲೇ ಕಣ್ಣರಳಿಸ್ತಾರೆ. ಲಹರಿ ಅನ್ನೋದು ಕೇವಲ ಆಡಿಯೋ ಸಂಸ್ಥೆಯಲ್ಲ, ಅದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗಿ ಹೋಗಿದೆ. ಇಂಥ ಲಹರಿ ವೇಲುಗೆ ಈಗ ಒಂದು ಪ್ರತಿಷ್ಟಿತ ಅವಾರ್ಡ್ ಸಿಕ್ಕಿದೆ. ಅದು ಯೂಟ್ಯೂಬ್ ಗೋಲ್ಡ್ ಬಟನ್ ಅವಾರ್ಡ್. 

ಸಾಮಾನ್ಯವಾಗಿ ಯೂಟ್ಯೂಬ್‍ನಲ್ಲಿ 10 ಲಕ್ಷ ಚಂದಾದಾರರಿವ ಸಂಸ್ಥೆಗೆ ಯೂಟ್ಯೂಬ್‍ನವರೇ ಅವಾರ್ಡ್ ಕೊಡ್ತಾರೆ. ಲಹರಿ ವೇಲು ಅವರ ಯೂಟ್ಯೂಬ್ ಚಾನೆಲ್‍ಗೆ 15 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಅದರಲ್ಲೂ ಇತ್ತೀಚೆಗೆ ಬಾಹುಬಲಿ ಸಿನಿಮಾ ಲಹರಿ ಸಂಸ್ಥೆ ಕೋಡನ್ನೇ ಮೂಡಿಸಿಬಿಟ್ಟಿದೆ.

ಪ್ರೇಮಲೋಕದಿಂದ ಶುರುವಾದ ಯಶಸ್ಸಿನ ಅಭಿಯಾನ, ಜಾನಪದ, ಭಕ್ತಿಗೀತೆ, ಭಾವಗೀತೆಗಳೂ ಸೇರಿದಂತೆ ಎಲ್ಲ ವಿಭಿನ್ನ ವಿಶೇಷಗಳನ್ನೂ ಒಳಗೊಂಡಿರುವುದೇ ಈ ಪ್ರಶಸ್ತಿ ಸಿಗಲು ಪ್ರಮುಖ ಕಾರಣ. ಅಂದಹಾಗೆ ಲಹರಿ ವೇಲು ಅವರ ಯೂಟ್ಯೂಬ್‍ ಚಾನೆಲ್‍ನಲ್ಲಿ ಒಂದೂಮುಕ್ಕಾಲು ಲಕ್ಷಕ್ಕೂ ಹೆಚ್ಚು ಹಾಡುಗಳಿವೆ. 

Related Articles :-

YouTube Gold Play Button Awards Lahari Music

 

Raju Kannada Medium Movie Gallery

Choorikatte Movie Gallery