` ಹೇಮಾ ಪಂಚಮುಖಿ, ಸುಮಂತ್ ವಿವಾಹ ಬಂಧನ - chitraloka.com | Kannada Movie News, Reviews | Image

User Rating: 2 / 5

Star activeStar activeStar inactiveStar inactiveStar inactive
 
hema panchamukhi, sumanth
Hema Panchamukhi, Sumanth Ties Knot

ಹೇಮಾ ಪಂಚಮುಖಿ. ಅಮೆರಿಕ ಅಮೆರಿಕಾದ ಭೂಮಿಕಾ, ರವಿಮಾಮನ ಪ್ರೀತಿಯ ತಂಗಿ, ಸಂಭ್ರಮದ ಮೂಕ ಹುಡುಗಿ, ದೊರೆ ಮೊದಲಾದ ಸಿನಿಮಾಗಳಲ್ಲಿ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದಿದ್ದವರು. ಈಗ ಮದುವೆಯಾಗಿದ್ದಾರೆ. ಮದುವೆಯಾಗಿರುವುದು ರಂಗೋಲಿ ಚಿತ್ರದ ಖ್ಯಾತಿಯ ಸುಮಂತ್ ಅವರನ್ನ.

ಅಂದಹಾಗೆ ಸುಮಂತ್ ಅವರ ನಿಜವಾದ ಹೆಸರು ಪ್ರಶಾಂತ್ ಗೋಪಾಲ ಸ್ವಾಮಿ. ಮದುವೆಯ ಸುದ್ದಿಯನ್ನು ಇಬ್ಬರೂ ತಮ್ಮ ತಮ್ಮ ಫೇಸ್‍ಬುಕ್ ಪೇಜ್‍ಗಳಲ್ಲಿ ಹಂಚಿಕೊಂಡಿದ್ದಾರೆ. 

ಸಿನಿಮಾ ಕ್ಷೇತ್ರದಿಂದ ದೂರವೇ ಇರುವ ಹೇಮಾ, ಅದ್ಭುತ ನೃತ್ಯಗಾತಿ. ಬೆಂಗಳೂರಿನಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ಹೇಮಾ, ನೂರಾರು ಮಕ್ಕಳಿಗೆ ನೃತ್ಯದ ಪಾಠ ಹೇಳಿಕೊಡುತ್ತಾರೆ. ಸ್ಟೇಜ್‍ಗಳಲ್ಲಿ ಶೋ ಕೊಡುತ್ತಾರೆ. ಪ್ರಶಾಂತ್ (ಸುಮಂತ್) ಕೂಢಾ ಭರತನಾಟ್ಯ ಕಲಾವಿದ. 

ಹೇಮಾ ಪಂಚಮುಖಿ, ಈ ಹಿಂದೆ ಮದುವೆಯಾಗಿದ್ದವರು. ಡೈವೋರ್ಸ್ ತೆಗೆದುಕೊಂಡಿದ್ದ ಹೇಮಾ ಅವರು ಹೊಸ ಬದುಕಿನ ಹೆಜ್ಜೆಯಿಟ್ಟಿದ್ದಾರೆ. ಶುಭವಾಗಲಿ.

Raju Kannada Medium Movie Gallery

Choorikatte Movie Gallery