` ಪ್ರೀತೀನಾ.. ಐಶ್ವರ್ಯಾನಾ..? ಸೆಕೆಂಡ್‍ಗಳಲ್ಲಿ ತಿಳ್ಕೊಳ್ಳಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
3 gante 30 minutes 30 seconds movie image
Kavya Shetty, Arun Gowda In 3 Gante

ತರ್ಕ, ಮನಸಿನ ಭಾಷೆ. ಭಾವನೆ, ಹೃದಯದ ಭಾಷೆ. ತರ್ಕಬದ್ಧವಾಗಿ ಆಲೋಚನೆ ಮಾಡುವವರು ಜೀವನದಲ್ಲಿ ಹಣ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಪಡೀತಾರೆ. ಭಾವನೆಗಳಿಗೆ ಬದ್ಧವಾಗಿರುವವರು ಸದಾ ನೆಮ್ಮದಿಯಾಗಿ, ಸುಖಿಗಳಾಗಿರುತ್ತಾರೆ.

ಈ ಎರಡೂ ಒಬ್ಬರಿಗೇ ಸಿಕ್ಕುವುದು ಅಪರೂಪ. ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳೋಕೆ ಸಾಧ್ಯ. ಇಂಥಾದ್ದೊಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾ 3 ಗಂಟೆ, 30 ದಿನ , 30 ಸೆಕೆಂಡ್.

ಚಿತ್ರದ ಹೆಸರು ವಿಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ ಅನ್ನೋದು ಚಿತ್ರದ ನಿರ್ದೇಶಕ ಮಧುಸೂದನ್. ಚಿತ್ರದ ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಪ್ರೀತಿಯ ಪೋಸ್ಟ್‍ಮಾರ್ಟಮ್. ಚಿತ್ರಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್ ಆರ್. ಪದ್ಮಶಾಲಿಯವರಷ್ಟೇ ಅಲ್ಲ, ಇಡೀ ಚಿತ್ರತಂಡದಲ್ಲಿರುವ ಬಹುತೇಕರು ಪರಸ್ಪರ ಗೆಳೆಯರು. 

ಪ್ರೇಕ್ಷಕರ ಹೃದಯ ಕದಿಯಲು 30 ಸೆಕೆಂಡ್ ಸಾಕು ಎಂಬ ವಿಶ್ವಾಸದಲ್ಲಿದೆ ಚಿತ್ರ ತಂಡ. ಸೆಕೆಂಡ್ ಲೆಕ್ಕ ಅಲ್ವಾ..? ನೋಡೇ ನೋಡ್ತಿವಿ ಬಿಡಿ.

#

Chamak Movie Gallery

Rightbanner02_tora_inside

Tora Tora PressMeet Gallery