` ಸಿದ್ಧಾರೂಡ ಮಠಕ್ಕೆ ಕಾಜೊಲ್ ಬಂದಿದ್ದಾರೂ ಏಕೆ..? - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
kajol visited siddarudha mutt
Kajol In Siddarudha Mutt?

ಮೊನ್ನೆ ಮೊನ್ನೆಯಷ್ಟೇ ಬಾಲಿವುಡ್ ನಟಿ ಕಾಜೊಲ್, ಹುಬ್ಬಳ್ಳಿಯ ಸಿದ್ಧಾರೂಡ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ಕೊಟ್ಟಿದ್ದು, ವಿಶೇಷ ಪೂಜೆ ಮಾಡಿದ್ದನ್ನು ನೋಡಿದವರಿಗೆ ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ಸಿದ್ಧಾರೂಡ ಮಠಕ್ಕೂ, ದೇವಗನ್ ಕುಟುಂಬಕ್ಕೂ ಎಲ್ಲಿಂದೆಲ್ಲಿಯ ನಂಟು ಎಂಬ ಕುತೂಹಲ ಎಲ್ಲರಿಗೂ ಇತ್ತು.

ಆದರೆ, ಕಾಜೊಲ್ ಸಿದ್ಧಾರೂಢ ಮಠಕ್ಕೆ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗಾಗ್ಗೆ ಬರುತ್ತಲೇ ಇರುತ್ತಾರಂತೆ. ಕಾಜೊಲ್ ಅವರ ತಂದೆ ಕೂಡಾ ಮಠಕ್ಕೆ ಬರುತ್ತಿದ್ದರು. ಈ ಬಾರಿ ತಾಯಿ ಹಾಗೂ ಮಕ್ಕಳ ಜೊತೆ ಬಂದು ಹೋಗಿರುವ ಕಾಜೊಲ್‍ಗೆ, ಮಠದಲ್ಲಿ ನೆಮ್ಮದಿ ಸಿಗುತ್ತಂತೆ.

ತಮ್ಮನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರೂ, ಮಠದಲ್ಲಿ 15 ನಿಮಿಷ ಧ್ಯಾನ ಮಾಡಿದ ಕಾಜೊಲ್‍ಗೆ, ಮಠದಲ್ಲಿ ಧ್ಯಾನ ಮಾಡಿದರೆ, ಮನಸ್ಸಿಗೆ ಶಾಂತಿ ಸಿಗುತ್ತಂತೆ. 

ಪ್ರತಿ ಬಾರಿ ಹುಬ್ಬಳ್ಳಿಗೆ ಬಂದಾಗಲೂ ಸದ್ದಿಲ್ಲದೆ ಮಠಕ್ಕೆ  ಬಂದು ಹೋಗುತ್ತಿದ್ದ ಕಾಜೊಲ್‍ಗೆ, ಈ ಬಾರಿ ಅದು ಸಾಧ್ಯವಾಗಲಿಲ್ಲ. ಅದು ಹೇಗೋ ಸುದ್ದಿ ಗೊತ್ತಾಗಿ, ಅಭಿಮಾನಿಗಳು ತುಂಬಿಬಿಟ್ಟರು. ಮಾಧ್ಯಮಗಳೂ ಜಮಾಯಿಸಿದವು. ಹೀಗಾಗಿ ಕಾಜೊಲ್ ತಮ್ಮ ಧ್ಯಾನ ಹಾಗೂ ಪೂಜೆಗೆ ಭಂಗವಾಯಿತೆಂದು ಬೇಸರ ಮಾಡಿಕೊಂಡರಂತೆ.

#

Chamak Movie Gallery

Rightbanner02_tora_inside

Anjaniputra Movie Gallery