` ಪ್ರಾಣವನ್ನೇ ತೆಗೆಯುವಂಥಾಧ್ದು ನಂದಿನಿ ಧಾರಾವಾಹಿಯಲ್ಲಿದೆಯಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
what is the story of nandini serial
Nandini Serial

ನಂದಿನಿ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲೇ ನಂ.1 ಧಾರಾವಾಹಿ. ಧಾರಾವಾಹಿಗಳ ಟಿಆರ್‍ಪಿ ರೇಸ್‍ನಲ್ಲಿ ಹೆಚ್ಚೂ ಕಡಿಮೆ ಹೊರಬಿದ್ದಿದ್ದ ಉದಯ ಟಿವಿ, ಮತ್ತೆ ರೇಸ್‍ಗೆ ಬಂದಿರೋದೇ ಈ ನಂದಿನಿ ಧಾರಾವಾಹಿಯಿಂದ. ಹೀಗಾಗಿಯೇ ಈ ಧಾರಾವಾಹಿ ಈಗ ಪ್ರತಿದಿನ ಅರ್ಧ ಗಂಟೆ ಅಲ್ಲ, ಒಂದು ಗಂಟೆ ಪ್ರಸಾರವಾಗುತ್ತಿದೆ. 

ಈ ಧಾರಾವಾಹಿ ನೋಡಿ ಪ್ರಾರ್ಥನಾ ಎಂಬ 7 ವರ್ಷದ ಪುಟಾಣಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಧಾರಾವಾಹಿಯಲ್ಲಿ ನಾಯಕಿ ಬೆಂಕಿಯ ಮಧ್ಯೆ ನಿಲ್ಲುವ ದೃಶ್ಯ ನೋಡಿ, ಅದನ್ನೇ ಅನುಕರಿಸಲು ಹೋಗಿ.. ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾಳೆ ಪುಟಾಣಿ. 

ಇಷ್ಟಕ್ಕೂ ಈ ಧಾರಾವಾಹಿಯಲ್ಲಿ ಅಂಥಾದ್ದೇನಿದೆ ಎಂದರೆ, ಅದ್ಭುತ ಕಥೆಯೇನೂ ಇಲ್ಲ. ಆದರೆ, ಒಂದೇ ಧಾರಾವಾಹಿಯಲ್ಲಿ ಕಿರುತೆರೆಯ ಹಾಟ್ ಸಬ್ಜೆಕ್ಟ್‍ಗಳಾದ ದೆವ್ವಗಳಿವೆ. ನಾಗರಹಾವುಗಳಿವೆ. ನಾಗದೇವತೆ, ಕ್ಷುದ್ರ ದೇವತೆ, ಮಾಟ ಮಂತ್ರ, ದೇವರು, ಪ್ರೀತಿ, ದ್ವೇಷ ಎಲ್ಲವೂ ಇದೆ. ಖುಷ್ಬೂ ಪಾರ್ವತಿಯ ಪಾತ್ರದಲ್ಲಿದ್ದರೆ, ವಿಜಯಲಕ್ಷ್ಮಿ (ನಾಗಮಂಡಲ ಖ್ಯಾತಿ), ನಿತ್ಯಾರಾಮ್ (ರಚಿತಾ ರಾಮ್ ಅವರ ಸೋದರಿ)ರಂತಹ ಕಲಾವಿದರು ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ.

ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಉದಯ ಟಿವಿಯನ್ನು ಟಿಆರ್‍ಪಿ ರೇಸ್‍ಗೆ ತಂದಿದೆ ಎನ್ನುವುದು ನಿಜವಾದರೂ, ಧಾರಾವಾಹಿಯಲ್ಲಿ ಮೌಢ್ಯಗಳ ವಿಜೃಂಭಣೆಗೆ ಒಂದು ಅಮೂಲ್ಯ ಜೀವವೇ ಹೋಯಿತು ಎನ್ನುವುದು ಕೂಡಾ ಅಷ್ಟೇ ಸತ್ಯ. ಪೋಷಕರು ಹುಷಾರಾಗಿರಬೇಕು.

#

Smuggler Release Meet Gallery

Rightbanner02_tora_inside

Tora Tora PressMeet Gallery