` ಪುನೀತ್ ಗಡ್ಡ ಬಿಡೋಕೆ ಇವರೇ ಕಾರಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth in beard
Puneeth Rajkumar Image

ಪುನೀತ್ ರಾಜ್‍ಕುಮಾರ್, ತಮ್ಮ ಚಿತ್ರಗಳಲ್ಲಿಯಾಗಲೀ, ಹೊರಗೆ ಕಾರ್ಯಕ್ರಮಗಳಲ್ಲಿಯಾಗಲೀ ನೀಟ್ ಶೇವ್ ಆಗಿಯೇ ಕಾಣಿಸಿಕೊಳ್ಳುವವರು. ಅಂಥಾದ್ದರಲ್ಲಿ ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ಹೋದಲ್ಲಿ, ಬಂದಲ್ಲಿ ಗಡ್ಡ ಕಾಣ್ತಾನೇ ಇದೆ. ಜೊತೆಗೆ ಪುನೀತ್ ಸ್ವಲ್ಪ ದಪ್ಪಗಾಗಿರುವುದೂ ಕಾಣ್ತಾ ಇದೆ.

ಫಿಟ್‍ನೆಸ್ ವಿಚಾರಕ್ಕೆ ಬಂದರೆ, ಪುನೀತ್ ನಂ.1 ಸ್ಥಾನದಲ್ಲಿ ನಿಲ್ಲುವವರು. ಅಂಥಾದ್ದರಲ್ಲಿ ಏನಿದು ಎಂದು ಬೆನ್ನು ಹತ್ತಿದರೆ, ಈ ಗಡ್ಡ ಹಾಗೂ ದಪ್ಪ ದೇಹದ ಹಿಂದಿನ ಕಾರಣಕರ್ತ ಶಶಾಂಕ್ ಎನ್ನುವುದು ಬಹಿರಂಗವಾಗಿದೆ. ನಿರ್ದೇಶಕ ಶಶಾಂಕ್, ಪುನೀತ್ ಅವರ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವುದು ಹಳೆಯ ಸುದ್ದಿ. ಶಶಾಂಕ್ ಅವರ ಆ ಚಿತ್ರಕ್ಕಾಗಿಯೇ ಪುನೀತ್ ಇಷ್ಟೆಲ್ಲ ಸರ್ಕಸ್ ಮಾಡುತ್ತಿದ್ದಾರೆ.

ಪ್ರತಿದಿನ ಮಾಡುತ್ತಿದ್ದ ಜಿಮ್ ವರ್ಕೌಟ್‍ನ ಹೊರತಾಗಿ ಇನ್ನಷ್ಟು ಬೆವರು ಹರಿಸುತ್ತಿದ್ದಾರೆ. ಜಿಮ್ ಟ್ರೈನರ್ ಸುಧಾಕರ್ ಶೆಟ್ಟಿ, ಪುನೀತ್ ಅವರಿಂದ ಹೆವಿ ವರ್ಕೌಟ್ ಮಾಡಿಸುತ್ತಿದ್ದಾರೆ. ಶಶಾಂಕ್ ಅವರ ಚಿತ್ರದಲ್ಲಿ ಪುನೀತ್ ಗಡ್ಡಧಾರಿಯಾಗಿ, ಸಿಕ್ಸ್‍ಪ್ಯಾಕ್‍ನಲ್ಲಿ ಕಾಣಿಸಿಕೊಳ್ತಾರಂತೆ.

ನನ್ನ ಕಲ್ಪನೆಯ ಪಾತ್ರಕ್ಕೆ ಪುನೀತ್ ಸಿದ್ಧರಾಗುತ್ತಿದ್ಧಾರೆ. ಅದರ ಹೊರತಾಗಿ ಚಿತ್ರ ಹಾಗೂ ಪುನೀತ್ ಪಾತ್ರದ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಶಶಾಂಕ್.

#

Smuggler Release Meet Gallery

Rightbanner02_tora_inside

Tora Tora PressMeet Gallery