` ಅಬ್ಬಾ..!!! ಅಮೃತವರ್ಷಿಣಿ ಮುಗಿಯಿತು..! - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
amruthavarshini serial ends
Amruthavarshini Serial

ಅಮೃತವರ್ಷಿಣಿ. ಸುವರ್ಣ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ. ಬರೋಬ್ಬರಿ ಐದೂವರೆ ವರ್ಷಗಳ ನಂತರ ಧಾರಾವಾಹಿ ಮುಗಿಯುತ್ತಿದೆ. ನಾಳೆ ಅಂದರೆ, ನವೆಂಬರ್ 24 ಧಾರಾವಾಹಿಯ ಕೊನೆಯ ಕಂತು ಪ್ರಸಾರವಾಗಲಿದೆ. ಅದು 1700ನೇ ಕಂತು.

ಹಾಗಂತ ಏಕಾಏಕಿ ನ.24ಕ್ಕೇ ಎಂಡ್ ಆಗಿ ಕಣ್ಮರೆಯಾಗಲ್ಲ. ಅದಾದ ಮೇಲೆ ಒಂದು ವಾರ ಡಿ.1ರವರೆಗೆ ಪ್ರತಿ ರಾತ್ರಿ 9.30ಕ್ಕೆ ಧಾರಾವಾಹಿಯ ಹೈಲೈಟ್ಸ್ ಪ್ರಸಾರವಾಗಲಿದೆ. 

ಇದು ರವಿ ಗರಣಿ ಸಾರಥ್ಯದ ಆರ್‍ಜೆ ಮೀಡಿಯಾದಿಂದ ಪ್ರಸಾರವಾಗಿದ್ದ ಧಾರಾವಾಹಿ. ಸುಮ್ಮನೆ ಕುತೂಹಲಕ್ಕಿರಲಿ, ಈ ಧಾರಾವಾಹಿ ಶುರುವಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಅಷ್ಟೆಲ್ಲ ಯಾಕೆ, ಸುವರ್ಣ ವಾಹಿನಿ, ಸುವರ್ಣ ವಾಹಿನಿಯಾಗಿಯೇ ಇತ್ತು. ಈಗ ಅದು ಸ್ಟಾರ್ ಸುವರ್ಣ ವಾಹಿನಿ. ಹೀಗೆ ಹಲವು ಬೆಳವಣಿಗೆಗಳ ಮಧ್ಯೆಯೂ ಅಮೃತವರ್ಷಿಣಿ ಸತತ 6 ವರ್ಷ ಚಾಲ್ತಿಯಲ್ಲಿತ್ತು ಎನ್ನುವುದು ವಿಶೇಷ.

#

Chamak Movie Gallery

Rightbanner02_tora_inside

Anjaniputra Movie Gallery