` ರಾಜಕುಮಾರನಿಗೆ ರಾಜಕುಮಾರಿ ಸಿಕ್ಕಿದ್ಲು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rajakumara director santhosh anandram
Santhosh Anandram Engaged To Surabhi

ರಾಜಕುಮಾರನೆಂದರೆ, ಅಭಿಮಾನಿಗಳಿಗೆ ತಕ್ಷಣ ನೆನಪಾಗೋದು ಪುನೀತ್ ರಾಜ್‍ಕುಮಾರ್. ಆ ರಾಜಕುಮಾರ ಎಂಬ ಚಿತ್ರದ ಹಿಂದಿನ ಮಾಸ್ಟರ್ ನಿರ್ದೇಶಕ ಸಂತೋಷ್ ಆನಂದರಾಮ್. ಅವರಿಗೀಗ ರಾಜಕುಮಾರಿ ಸಿಕ್ಕಿದ್ದಾರೆ. ತಾವೀಗ ಎಂಗೇಜ್ ಎಂಬ ವಿಷಯವನ್ನು ಸ್ವತಃ ಸಂತೋಷ್ ಆನಂದ್‍ರಾಮ್ ಹೇಳಿಕೊಂಡಿದ್ದಾರೆ.

ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸುರಭಿ. ಬಳ್ಳಾರಿಯಲ್ಲಿ ಇದೇ ತಿಂಗಳ 26ರಂದು ನಿಶ್ಚಿತಾರ್ಥ ನಡೆಯಲಿದೆ. ಸುರಭಿ, ಸಂತೋಷ್ ಆನಂದ್‍ರಾಮ್ ಅವರ ಫ್ಯಾಮಿಲಿ ಫ್ರೆಂಡ್. ಬಿಇ ಮಾಡಿ ಎಂಟೆಕ್ ಮಾಡಿರುವ ಸುರಭಿ, ಶ್ರೀನಿವಾಸ್ ಹಾಗೂ ಭಾವನಾ ಹತ್ವಾರ್ ಅವರ ಏಕೈಕ ಪುತ್ರಿ. 

ಸದ್ಯಕ್ಕೆ ಸಂತೋಷ್ ಬಾಯ್ಬಿಟ್ಟಿರುವ ಸತ್ಯ ಇಷ್ಟೆ. ಇದು ಲವ್ ಮ್ಯಾರೇಜಾ..? ಅರೇಂಜ್ ಮ್ಯಾರೇಜಾ..? ಗೊತ್ತಿಲ್ಲ. ಮೂಲತಃ ಬಳ್ಳಾರಿಯವರಾದರೂ ಸುರಭಿ ಇರುವುದು ಬೆಂಗಳೂರಿನಲ್ಲಿ. ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಸಂತೋಷ್‍ಗೆ ಶುಭ ಹಾರೈಸೋಣ.

#

Smuggler Release Meet Gallery

Rightbanner02_tora_inside

Tora Tora PressMeet Gallery