` ಅಪ್ಪು, ಯಶ್, ಧ್ರುವಾ ಬಗ್ಗೆ ಶಿವಣ್ಣ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
shivanna speaks about yash, appu, and dhruva
Shivarajkumar Image

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸೆಂಚುರಿ ಸ್ಟಾರ್ ಆಗಿದ್ದರೂ ದೊಡ್ಡಸ್ತಿಕೆ ಮೆರೆಯುವ ನಟರಲ್ಲ. ಸರಳತೆ ಶಿವಣ್ಣನವರ ಟ್ರೇಡ್‍ಮಾರ್ಕ್. ಅದು ಟಗರು ಚಿತ್ರದ ಆಡಿಯೋ ಲಾಂಚ್‍ನಲ್ಲೂ ಮತ್ತೊಮ್ಮೆ ಬಹಿರಂಗವಾಗಿದೆ.

ಟಗರು ಚಿತ್ರದ ಆಡಿಯೋ ಲಾಂಚ್ ಮಾಡುತ್ತಿದ್ದವರೇ ಅಭಿಮಾನಿಗಳು. ಶಿವು ಅಡ್ಡ ಹಾಗೂ ಶಿವು ಡೈನೆಸ್ಟಿ ಹುಡುಗರು. ಹೀಗಾಗಿ ಸಹಜವಾಗಿಯೇ ಶಿವರಾಜ್ ಕುಮಾರ್ ಅಭಿಮಾನಿಗಳ ಅಬ್ಬರ ಜೋರಿತ್ತು. ಆಡಿಯೋ ಲಾಂಚ್‍ನಲ್ಲಿ ಅಭಿಮಾನಿಗಳಿಂದ ಡ್ಯಾನ್ಸ್ ಡ್ಯಾನ್ಸ್ ಎಂಬ ಕೂಗು ಕೇಳಿಬಂದಾಗ ಶಿವಣ್ಣ ಹೇಳಿದ್ದಿಷ್ಟು.

`ಸಾಕ್ರಪ್ಪಾ.. 33 ವರ್ಷಗಳಿಂದ ಡ್ಯಾನ್ಸ್ ಮಾಡುತ್ತಲೇ ಇದ್ದೇನೆ. ಇನ್ನೂ ನಾನೇ ಡ್ಯಾನ್ಸ್ ಮಾಡಬೇಕಾ..? ಅಪ್ಪು ನನಗಿಂತ ಚೆನ್ನಾಗಿ  ಡ್ಯಾನ್ಸ್ ಮಾಡ್ತಾನೆ. ಯಶ್, ಧ್ರುವ, ರಕ್ಷಿತ್ ಶೆಟ್ಟಿ.. ಅವರೆಲ್ಲ ಎಷ್ಟು ಒಳ್ಳೆಯ ಡ್ಯಾನ್ಸ್ ಮಾಡ್ತಾರೆ. ಅವರ ಬಳಿ ಡ್ಯಾನ್ಸ್ ಮಾಡಿಸಿ. ನನಗೂ ಐವತ್ತಾಯ್ತಲ್ವಾ..?..

ಶಿವಣ್ಣ ಏನೇ ಹೇಳಿದ್ರೂ ಅಷ್ಟೆ. ಅಭಿಮಾನಿಗಳು ಹಠ ಬಿಡಲಿಲ್ಲ. ಶಿವಣ್ಣ ಕೈಲಿ ಒಂದ್ ಸ್ಟೆಪ್ ಹಾಕಿಸೋವರೆಗೂ ಸುಮ್ಮನಾಗಲಿಲ್ಲ. 

Raju Kannada Medium Movie Gallery

Choorikatte Movie Gallery