` ಪ್ರಭುದೇವ ಜೊತೆ ನಿಕ್ಕಿ ಗರ್ಲಾನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nikki galrani teamed  up with prabhudeva
Prabhu Deva, Nikki Galrani Image

ಪ್ರಭುದೇವ, ಈಗ ಭಾರತದ ಮೈಕೆಲ್ ಜಾಕ್ಸನ್ ಎನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದಾರೆ. ಇಂತಹ ಪ್ರಭುದೇವ ಈಗ ಚಾರ್ಲಿ ಚಾಪ್ಲಿನ್ ಎಂಬ ಚಿತ್ರ ಮಾಡುತ್ತಿದ್ದಾರೆ. ಅದು ಅವರೇ ನಟಿಸಿದ್ದ ಹಳೆಯ ಸಿನಿಮಾ. ತಮಿಳಿನಲ್ಲಿ ಮಾಡಿದ್ದ ಅದೇ ಸಿನಿಮಾವನ್ನು ಈಗ 6 ಭಾಷೆಗಳಲ್ಲಿ ಮತ್ತೆ ನಿರ್ಮಿಸಲು ಮುಂದಾಗಿದ್ದಾರೆ ಪ್ರಭುದೇವ.

ಆ ಚಿತ್ರದಲ್ಲಿ ನಿಕ್ಕಿ ಗರ್ಲಾನಿ ಅವರಿಗೆ ಒಂದು ಪ್ರಮುಖ ಪಾತ್ರವಿದೆಯಂತೆ. ಒಂದು ಸಣ್ಣ ಕನ್‍ಫ್ಯೂಷನ್ ಏನೇನೆಲ್ಲ ಅವಾಂತರ ಸೃಷ್ಟಿಸಬಹುದು ಎಂಬುದನ್ನು ನಕ್ಕೂ ನಕ್ಕೂ ಸುಸ್ತಾಗುವಂತೆ ಹೇಳಿದ್ದರು ಆ ಚಿತ್ರದ ನಿರ್ದೇಶಕ ಶಕ್ತಿ ಚಿದಂಬರಂ. ಈಗ ಅದೇ ಚಿತ್ರದಲ್ಲಿ ನಿಕ್ಕಿ ಗರ್ಲಾನಿ ಪ್ರಭುದೇವ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೊಬ್ಬ ನಾಯಕಿಯಾಗಿ ಕರುಪ್ಪಮ್ ಖ್ಯಾತಿಯ ತನ್ಯಾ ರವಿಚಂದ್ರನ್ ಇರುತ್ತಾರೆ. ಪ್ರಭುದೇವ ಜೊತೆ ನಟಿಸುವ ಅವಕಾಶ ನಿಕ್ಕಿ ಗರ್ಲಾನಿ ಅವರನ್ನು ಥ್ರಿಲ್ ಆಗುವಂತೆ ಮಾಡಿದೆ.

Athiratha Movie Gallery

Rightbanner02_smuggler_inside

Uppu Huli Khara Movie Gallery