` ಕೆಂಡಸಂಪಿಗೆ ಮಾನ್ವಿತಾ ರಾಜಕುಮಾರಿಯಾದಾಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manvitha's new look
Manvitha Harish Image

ಕೆಂಡ ಸಂಪಿಗೆ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಮಾನ್ವಿತಾ ಹರೀಶ್, ಈಗ ಎರಡು ಚಿತ್ರಗಳಲ್ಲಿ ಬ್ಯುಸಿ. ಕನಕ ಹಾಗೂ ಟಗರು ಚಿತ್ರಗಳಲ್ಲಿ ನಟಿಸುತ್ತಿರುವ ಮಾನ್ವಿತಾ, ಟಗರು ಚಿತ್ರದಲ್ಲಿ ವಿಶೇಷ  ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ನೋಡಿದವರು ಈಕೆ ಯಾವ ದೇಶದ ರಾಜಕುಮಾರಿ ಎನ್ನಬೇಕು. ಹಾಗಿದೆ ಹೊಸ ಲುಕ್ಕು.

ಈ ರಾಜಕುಮಾರಿ ಡ್ರೆಸ್‍ನ ಹಿಂದಿರೋದು ರಷ್ಯಾ ಮೂಲಕ ವಸ್ತ್ರ ವಿನ್ಯಾಸಕಿ ಎರಿಕಾ. ದೇಶ ವಿದೇಶಗಳನ್ನು ಸುತ್ತುತ್ತಲೇ ಇಷ್ಟವಾದ ಬಟ್ಟೆಗಳನ್ನೆಲ್ಲ ಕೊಂಡುಕೊಳ್ಳುವ ವಸ್ತ್ರ ವಿನ್ಯಾಸಕಿ ಎರಿಕಾ, ಟಗರು ಚಿತ್ರಕ್ಕೆ ವಸ್ತ್ರ ವಿನ್ಯಾಸಕಿ. ಆಕೆ ಗೋವಾದಲ್ಲಿ ಸಿದ್ದ ಉಡುಪುಗಳನ್ನು ಮಾರುತ್ತಾರೆ. ಗೋವಾದಲ್ಲಿಯೇ ಸಿಗುವ ಡಿಸೈನ್‍ಗಳನ್ನು ಇಟ್ಟುಕೊಂಡು ವಿನ್ಯಾಸ ಮಾಡುವಂತೆ ನಿರ್ದೇಶಕ ಸೂರಿ ಹೇಳಿದ್ದರಂತೆ.

ನಿದೇಶಕ ಸೂರಿ ಹಾಗೂ ಶಿವರಾಜ್ ಕುಮಾರ್ ಇಬ್ಬರೂ ಬೆರಗಾಗುವಂತೆ ಈ ಡಿಸೈನ್ ಮಾಡಿಕೊಟ್ಟಿದ್ದಾರೆ ಎರಿಕಾ. ಮಾನ್ವಿತಾರ ಈ ಡಿಸೈನ್ ಚಿತ್ರತಂಡದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ಶಿವರಾಜ್ ಕುಮಾರ್ ಅವರಂತೂ ಇಡೀ ದಿನ ಬ್ಯೂಟಿಫುಲ್ ಬ್ಯೂಟಿಫುಲ್ ಎನ್ನುತ್ತಲೇ ಇದ್ದರಂತೆ.

#

16 Years To Majestic Gallery

Prema Baraha Success Meet Gallery