` ಶಿವಗಾಮಿ ರಮ್ಯಕೃಷ್ಣ ಕನ್ನಡದಲ್ಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivagami movie image
RamyaKrishna In Shivagami Movie

ರಮ್ಯಕೃಷ್ಣಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್, ವಿಷ್ಣುವರ್ಧನ್, ಉಪೇಂದ್ರ ಸೇರಿದಂತೆ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿರುವ ರಮ್ಯಕೃಷ್ಣ, ಈಗ ಭಾರತೀಯ ಚಿತ್ರರಂಗದಲ್ಲಿ ಶಿವಗಾಮಿಯೆಂದೇ ಪರಿಚಿತ. ಅದು ಬಾಹುಬಲಿ ಸೃಷ್ಟಿಸಿದ ಟ್ರೆಂಡ್.

ಈಗ ಅದೇ ಹೆಸರಲ್ಲಿ ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದ್ದು, ಚಿತ್ರಕ್ಕೆ ಮಧು ಮಿಣಕನ ಗುರ್ಕಿ ನಿರ್ದೇಶಕ. 9ನೇ ಶತಮಾನದ ರಾಣಿಯ ಕಥೆ ಹೊಂದಿರುವ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆಯಂತೆ. ಬಾಹುಬಲಿಗೆ ಕೆಲಸ ಮಾಡಿದ್ದ ಗ್ರಾಫಿಕ್ಸ್ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಗಂಗಪಟ್ಟಂ ಶ್ರೀಧರ್ ಚಿತ್ರದ ನಿರ್ಮಾಪಕ.

ಪ್ರವೀಣ್, ಅವಿನಾಶ್, ರವಿಕಾಳೆ, ಪಾಯಲ್, ರಮೇಶ್ ಪಂಡಿತ್ ಮೊದಲಾದವರು ನಟಿಸುತ್ತಿರುವ ಚಿತ್ರದ ಪ್ರಮುಖ ಆಕರ್ಷಣೆ, ಶಿವಗಾಮಿ ರಮ್ಯಕೃಷ್ಣ.

Athiratha Movie Gallery

Rightbanner02_smuggler_inside

Uppu Huli Khara Movie Gallery