` ಎಲೆಕ್ಷನ್‍ಗೆ ನಿಲ್ಲಲ್ಲ ಅಮೂಲ್ಯ. ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amulya will not contest in elections
Amulya Image

ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿ ವೈವಾಹಿಕ ಜೀವನದ ಸಂಭ್ರಮದಲ್ಲಿರುವ ಅಮೂಲ್ಯ, ಚಿತ್ರರಂಗದಿಂದ ದೂರವಾಗಿದ್ದಾರೆ. ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಯೂ ಇಲ್ಲ. ಹೀಗಿರುವಾಗಲೇ ಅಮೂಲ್ಯ ಚಿತ್ರರಂಗ ಬಿಟ್ಟು, ರಾಜಕೀಯಕ್ಕೆ ಬರುತ್ತಾರಂತೆ. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಾರಂತೆ ಎಂಬ ಸುದ್ದಿಗೆ ಇನ್ನಿಲ್ಲದ ವೇಗ ಸಿಕ್ಕಿಬಿಟ್ಟಿತ್ತು. ಈಗ ಅವುಗಳಿಗೆಲ್ಲ ಖುದ್ದು ಅಮೂಲ್ಯ ಫುಲ್‍ಸ್ಟಾಪ್ ಹಾಕಿದ್ದಾರೆ.

ಅಮೂಲ್ಯ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಹಾಗಂತ ರಾಜಕೀಯದಿಂದಲೇ ದೂರವೂ ಇರಲ್ಲ. ಏಕೆಂದರೆ ಅವರ ಮಾವ ರಾಮಚಂದ್ರಪ್ಪ ರಾಜಕಾರಣಿ.  ಬಿಜೆಪಿ ಟಿಕೆಟ್ ಆಕಾಂಕ್ಷಿ. ಅವರ ಪರವಾಗಿ ಅಮೂಲ್ಯ ಪ್ರಚಾರ ಮಾಡಲಿದ್ದಾರೆ.

ಇನ್ನು ಅಮೂಲ್ಯ ಅವರ ಕುಟುಂಬದ ಆತ್ಮೀಯರಾದ ಶಿಲ್ಪಾ ಗಣೇಶ್ ಕೂಡಾ ರಾಜಕಾರಣಿ. ಅಕಸ್ಮಾತ್ ಅವರಿಗೆ ಟಿಕೆಟ್ ಸಿಕ್ಕರೂ, ಅವರ ಪರವಾಗಿಯೂ ಅಮೂಲ್ಯ ಪ್ರಚಾರ ಮಾಡಲಿದ್ದಾರೆ. ಒಟ್ಟಿನಲ್ಲಿ ಅಮೂಲ್ಯ ಟಿಕೆಟ್ ತೆಗೆದುಕೊಂಡು ಸ್ಪರ್ಧೆಗಿಳಿಯುತ್ತಿಲ್ಲ ಅಷ್ಟೆ. ರಾಜಕಾರಣದಲ್ಲಂತೂ ಇರುತ್ತಾರೆ.

Athiratha Movie Gallery

Rightbanner02_smuggler_inside

Uppu Huli Khara Movie Gallery