` ಬಿಲ್ಡಪ್ ಕೊಟ್ಟಿದ್ದ ಪ್ರಥಮ್ ಮಾಡಿ ತೋರಿಸಿಬಿಟ್ಟರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pratham's build up
BuildUp Mocie Launch Image

ಬಿಗ್‍ಬಾಸ್ ಪ್ರಥಮ್, ಬಿಲ್ಡಪ್ ಕೊಡೋದ್ರಲ್ಲಿ ಹೆಸರುವಾಸಿ. ಆದರೆ, ಆ ಬಿಲ್ಡಪ್‍ಗಳನ್ನು ಹಾಗೆಯೇ ಬಿಟ್ಟವರೂ ಅಲ್ಲ. ಕೊಟ್ಟ ಬಿಲ್ಡಪ್‍ಗಳಿಗೆ ತಕ್ಕಂತೆ ಮಾಡಿ ತೋರಿಸಿದವರು. ಅವರು ತಮ್ಮ ಹೊಸ ಚಿತ್ರದ ಟೈಟಲ್ ಲಾಂಚ್ ಬಗ್ಗೆಯೂ ಇಂಥದ್ದೇ ಬಿಲ್ಡಪ್ ಕೊಟ್ಟಿದ್ದರು. ಸ್ಯಾಂಡಲ್‍ವುಡ್ ಸ್ಟಾರ್ ನಟರೊಬ್ಬರಿಂದ ತಮ್ಮ ಚಿತ್ರದ ಟೈಟಲ್ ಲಾಂಚ್ ಮಾಡಿಸುವುದಾಗಿ ಹೇಳಿಕೊಂಡಿದ್ದರು. ಆ ಬಿಲ್ಡಪ್‍ನಲ್ಲಿಯೂ ಗೆದ್ದಿದ್ದಾರೆ ಪ್ರಥಮ್.

ಪ್ರಥಮ್ ಅವರ ಹೊಸ ಚಿತ್ರದ ಟೈಟಲ್ ಲಂಚ್ ಮಾಡಿರುವುದು ಸ್ಯಾಂಡಲ್‍ವುಡ್ ಸ್ಟಾರ್ ಶಿವರಾಜ್ ಕುಮಾರ್. ಚಿತ್ರದ ಹೆಸರೂ ಅದೇ `ಬಿಲ್ಡಪ್'. 

ತಮ್ಮ ಎಂಎಲ್‍ಎ ಚಿತ್ರಕ್ಕೆ ಸಿದ್ದರಾಮಯ್ಯನವರಿಂದಲೇ ಕ್ಲಾಪ್ ಮಾಡಿಸಿದ್ದ, ಹಾಲಿ ಸಚಿವ ಎಚ್.ಎಂ. ರೇವಣ್ಣನವರಿಂದ ಸಿಎಂ ಪಾತ್ರ ಮಾಡಿಸುತ್ತಿರುವ ಪ್ರಥಮ್, ಬಿಲ್ಡಪ್ ಚಿತ್ರಕ್ಕೆ ನಾಯಕರಷ್ಟೇ ಅಲ್ಲ, ನಿರ್ದೇಶಕರೂ ಹೌದು.

Athiratha Movie Gallery

Rightbanner02_smuggler_inside

Uppu Huli Khara Movie Gallery