` ಉಪೇಂದ್ರ ವಿರುದ್ಧ ಬಿತ್ತು 2ನೇ ಕೇಸು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
2nd complaint aganist upendra
Upendra Image

ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಘೋಷಣೆ ಮಾಡಿದ್ದೇ ಮಾಡಿದ್ದು, ಒಂದರ ಹಿಂದೊಂದರಂತೆ ಎರಡು ಕೇಸುಗಳು ಬಿದ್ದಿವೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು ದೂರು ನೀಡಿದ್ದ ಬೆನ್ನಲ್ಲೇ, ಹೈಕೋರ್ಟ್ ವಕೀಲ ಎನ್.ಎಚ್.ಅಮೃತೇಶ್ ಉಪೇಂದ್ರ ವಿರುದ್ಧ ಇನ್ನೊಂದು ದೂರು ದಾಖಲಿಸಿದ್ದಾರೆ.

ಉಪೇಂದ್ರ ಗಾಂಧಿ ಭವನದಲ್ಲಿ ತಮ್ಮ ರಾಜಕೀಯ ಪಕ್ಷ ಘೋಷಿಸುವ ಸುದ್ದಿಗೋಷ್ಟಿ ನಡೆಸಿದ್ದೇ ತಪ್ಪು ಎನ್ನುವುದು ಅಮೃತೇಶ್ ಅವರ ದೂರು. ಏಕೆಂದರೆ, ಗಾಂಧಿ ಭವನದಲ್ಲಿ ಗಾಂಧಿ ವಿಚಾರಧಾರೆ, ಚರ್ಚೆ, ಮತ್ತಿತರ ಚಟುವಟಿಕೆಗಳಷ್ಟೇ ನಡೆಯಬೇಕು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಅದು ವೇದಿಕೆ ನೀಡುವುದಿಲ್ಲ. ಇದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಟ್ರಸ್ಟ್ ತನಗೆ ತಾನೇ ವಿಧಿಸಿಕೊಂಡಿರುವ ನಿರ್ಬಂಧ. ಹೀಗಿರುವಾಗ ಹೊಸ ರಾಜಕೀಯ ಪಕ್ಷದ ಘೋಷಣೆಗೆ ಗಾಂಧಿ ಭವನದಲ್ಲಿ ಅವಕಾಶ ನೀಡಿದ್ದು ತಪ್ಪು ಎನ್ನವುದು ಅಮೃತೇಶ್ ವಾದ.

ಇನ್ನು ಎನ್. ನಾಗೇಶ್ ಅವರು ಸಲ್ಲಿಸಿದ್ದ ದೂರಿನಲ್ಲಿದ್ದ ಮತದಾರರಿಗೆ ಹಣ ತೆಗೆದುಕೊಳ್ಳಿ, ವೋಟು ನನಗೆ ಹಾಕಿ ಎಂಬ ಹೇಳಿಕೆಯ ವಿರುದ್ಧವೂ ಅಮೃತೇಶ್ ದೂರು ನೀಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪ್ರವೇಶ ಘೋಷಣೆಯಾದ ನಂತರ, ಕೆಲವೇ ದಿನಗಳಲ್ಲಿ ಉಪೇಂದ್ರ ಮೇಲೆ ಕೇಸ್ ಮೇಲೆ ಕೇಸ್ ಬೀಳುತ್ತಿವೆ.

Related Articles :-

ಉಪೇಂದ್ರ ವಿರುದ್ಧ ಬಿತ್ತು ಮೊದಲ ಕೇಸು

ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

Athiratha Movie Gallery

Rightbanner02_smuggler_inside

Uppu Huli Khara Movie Gallery