` ನಾನು ಸತ್ತಿಲ್ಲ, ಬದುಕಿದ್ದೇನೆ ಎಂದರು ಪಿ.ಸುಶೀಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
p susheela clarifies her death news
P Susheela Image

ಹಿರಿಯ ಗಾಯಕಿ ಪಿ.ಸುಶೀಲ ಗುರುವಾರ ರಾತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ಅದು ಹೇಗೋ ಏನೋ ಸಾಮಾಜಿಕ  ಜಾಲತಾಣಗಳಲ್ಲಿ ಹಬ್ಬಿಬಿಟ್ಟಿತ್ತು. ಸಾವಿರಾರು ಅಭಿಮಾನಿಗಳು ಸಂತಾಪ ಸೂಚಿಸಿಯೂ ಆಗಿತ್ತು. ವಿಚಿತ್ರ ಎಂದರೆ, ಪಿ.ಸುಶೀಲ ಭಾರತದಲ್ಲೇ ಇರಲಿಲ್ಲ. ಅವರು ಅಮೆರಿಕದಲ್ಲಿದ್ದರು.

ಸುದ್ದಿ ಗೊತ್ತಾದ ನಂತರ ಕೊನೆಗೆ ನಾನು ಸತ್ತಿಲ್ಲ ಬದುಕಿದ್ದೇನೆ, ಆರೋಗ್ಯವಾಗಿದ್ದೇನೆ ಎಂದು ಸುಶೀಲ ಅವರೇ ಹೇಳಬೇಕಾಯ್ತು. ಅಮೆರಿಕದಿಂದಲೇ ವಿಡಿಯೋ ಮಾಡಿ ಕಳುಹಿಸಿದ ಸುಶೀಲ, ನನ್ನ ಬಗ್ಗೆ ವದಂತಿಗಳನ್ನು ನಂಬಬೇಡಿ. ನಾನು ಬದುಕಿದ್ದೇನೆ, ಆರೋಗ್ಯವಾಗಿದ್ದೇನೆ. ಭಾರತಕ್ಕೆ ವಾಪಸ್ ಆಗುತ್ತಿದ್ದೇನೆ ಎಂದು ವಿಡಿಯೋ ಕಳಿಸಿದರು. 

ಪಿ. ಸುಶೀಲ ಅವರಿಗೆ 81 ವರ್ಷ ವಯಸ್ಸು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ.. ಹೀಗೆ ಹಲವು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿರುವ ಪಿ.ಸುಶೀಲ, ಈಗ ನಾನು ಬದುಕಿದ್ದೇನೆ ಎಂದು ಹೇಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ, ಈ ಸುಳ್ಳು ಸಾವಿನ ಸುದ್ದಿ ಹಬ್ಬಿಸಿದ್ದು ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ.

Raju Kannada Medium Movie Gallery

Choorikatte Movie Gallery