` ತೆರೆಯ ಮೇಲೆ ಕ್ರಿಮಿನಲ್ ಸೈಕೋ ಶಂಕ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
psycho shankara a criminal case
Psycho Shankara Movie Image

ಸೈಕೋ ಶಂಕ್ರ. ಹೆಸರು ನೆನಪಿದೆಯಲ್ಲವಾ..? ಇವನ ಮೇಲಿದ್ದುದು 19 ರೇಪ್ ಕೇಸುಗಳು. ವಿಕೃತ ಕಾಮಿ. ಜೈಲಿನಿಂದಲೂ ತಪ್ಪಿಸಿಕೊಂಡು ಭಯ ಹುಟ್ಟಿಸಿದ್ದ ಸೈಕೋ ಶಂಕ್ರ ಅಲಿಯಾಸ್ ಜೈಶಂಕರ, ಈಗ ಮತ್ತೆ ಜೈಲು ಸೇರಿದ್ದಾನೆ. ಅವನ ಹೆಸರಿನಲ್ಲೊಂದು ಸಿನಿಮಾ ಬರುತ್ತಿದೆ. ಅದೇ ಸೈಕೋ ಶಂಕ್ರ.

ಇದು ಕ್ರಿಮಿನಲ್ ಒಬ್ಬನ ಕಥೆಯಾದರೂ, ಅವನ ಜೀವನ ಚರಿತ್ರೆ ಅಲ್ಲ. ಅತ್ಯಾಚಾರ ದೃಶ್ಯಗಳನ್ನೂ ಅಶ್ಲೀಲವಾಗಿ ತೋರಿಸಿಲ್ಲ. ಮನೆಮಂದಿಯೊಂದಿಗೆ ಆರಾಮವಾಗಿ ಕುಳಿತು ನೋಡಬಹುದು ಎನ್ನುತ್ತಾರೆ ನಿರ್ದೇಶಕ ಪುನೀತ್ ಆರ್ಯ. ನಿರ್ದೇಶಕ ಕಮ್ ನಟ ನವರಸನ್, ಸೈಕೋ ಶಂಕ್ರನಾಗಿ ವಿಜೃಂಭಿಸಿದ್ದರೆ, ಇನ್ನೊಂದು ಖಳನಟನ ಪಾತ್ರದಲ್ಲಿರೋದು ಪ್ರಣವ್. ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ನಟಿಸಿದ್ದಾರೆ. 

ಎಸ್. ಪ್ರಭಾಕರ್ ನಿರ್ಮಿಸಿರುವ ಈ ಚಿತ್ರಕ್ಕೆ ಅವರಿಗೆ ಪ್ರಥಮ ಚುಂಬನ. ಇನ್ನಷ್ಟು ಚಿತ್ರ ಮಾಡುವ ಕನಸುಗಳಿವೆ. ಕ್ರಿಮಿನಲ್ ಕಥೆಯಾದರೂ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದು ಎನ್ನುವ ನಂಬಿಕೆ ನಿರ್ಮಾಪಕರಿಗೂ ಇದೆ.

Raju Kannada Medium Movie Gallery

Choorikatte Movie Gallery