` ಜಿ.ಆರ್.ವಿಶ್ವನಾಥ್‍ರಿಂದ ಟಗರು ಟ್ರೇಲರ್ ಬಿಡುಗಡೆ  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gr vishwanath
G R Vishwanath, Tagaru Movie Image

ಜಿ.ಆರ್.ವಿಶ್ವನಾಥ್, ಭಾರತ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟರ್. ಅವರು ಬೌಂಡರಿಗಳನ್ನು ಹೊಡೆಯುತ್ತಿರಲಿಲ್ಲ. ಚೆಂಡನ್ನು ಮುದ್ದಿಸುತ್ತಿದ್ದರು. ಅಂಗಳದಲ್ಲಿ ಅವರು ಆಕರ್ಷಕ ಪೇಂಯ್ಟಿಂಗ್ ಬಿಡಿಸುತ್ತಿದ್ದರು ಎನ್ನುವುದು ಅವರ ಆಟದ ಶೈಲಿಗಿರುವ ಕಾಂಪ್ಲಿಮೆಂಟು. ಹೀಗೆ ಭಾರತೀಯ ಕ್ರಿಕೆಟ್‍ಗೆ ಕಲೆಯ ಸ್ಪರ್ಶ ನೀಡಿದ ವಿಶ್ವನಾಥ್, ಈಗ ಟಗರು ಚಿತ್ರದ ಟ್ರೇಲರ್ ಬಿಡುಗಡೆ ಮಾಡೋಕೆ ಒಪ್ಪಿದ್ದಾರೆ.

ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಲಾಂಚ್ ಆಗಲಿರುವ ಟಗರು ಚಿತ್ರದ ಟ್ರೇಲರ್‍ನ್ನು ಖುದ್ದು ವಿಶ್ವನಾಥ್ ಬಿಡುಗಡೆ ಮಾಡಲಿದ್ದಾರೆ. ಅಷ್ಟೇ ಅಲ್ಲ, ನವೆಂಬರ್ 7ರಂದು ನಡೆಯುವ ಆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬ್ರದರ್ಸ್ ಸಾಕ್ಷಿಯಾಗಲಿದ್ದಾರೆ.

ಇಡೀ ಕಾರ್ಯಕ್ರಮದ ಹಿಂದಿರುವುದು ಶಿವು ಅಡ್ಡಾ ಹಾಗೂ ರಾಜ್ ಡೈನಸ್ಟಿ. ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡಾ ಶಿವಣ್ಣ ಅಭಿಮಾನಿ ಸಂಘದವರೇ. ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಧನಂಜಯ್, ವಸಿಷ್ಟ ಸಿಂಹ, ಜಾಕಿ ಭಾವನಾ, ಮಾನ್ವಿತಾ ಹರೀಶ್ ಮೊದಲಾದವರಿದ್ದಾರೆ. ಅಂದಹಾಗೆ ಕಡ್ಡಿಪುಡಿ ನಂತರ ದುನಿಯಾ ಸೂರಿ ಹಾಗೂ ಶಿವಣ್ಣ ಜೊತೆಯಾಗಿರುವ 2ನೇ ಚಿತ್ರ ಇದು.

Related Articles :-

GR Vishwanath To Launch Tagaru Teaser

Athiratha Movie Gallery

Rightbanner02_smuggler_inside

Uppu Huli Khara Movie Gallery