` ಉಳುವಾ ಯೋಗಿಯ ನೋಡಲ್ಲಿ.. 4 ಭಾಷೆಗಳಿಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uluva yogiya song in 4 lang
Uluva Yogiya Song

ನೇಗಿಲ ಹಿಡಿದು ಹೊಲದೊಳು ಹಾಡುತ.. ಉಳುವಾ ಯೋಗಿಯ ನೋಡಲ್ಲಿ.. ಕುವೆಂಪು ಅವರು ಬರೆದಿರುವ ಈ ಗೀತೆ, ನಾಡಿನ ರೈತಗೀತೆಯೂ ಹೌದು. ಈ ಹಾಡಿಗೆ ಅಷ್ಟೇ ಅದ್ಭುತವಾಗಿ ಧ್ವನಿ ನೀಡಿದ್ದವರು ಗಾಯಕ ಸಿ.ಅಶ್ವತ್ಥ್.  ರಾಜ್, ಅನಂತ್ ನಾಗ್ ಅಭಿನಯದ ಕಾಮನಬಿಲ್ಲು ಚಿತ್ರದಲ್ಲಿ ಈ ಹಾಡನ್ನು ಅಷ್ಟೇ ಚೆಂದದಿಂದ ಬಳಸಿಕೊಳ್ಳಲಾಗಿತ್ತು. ಈಗ ಈ ಹಾಡು ಕರ್ನಾಟಕದ ಗಡಿ ದಾಟುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಹಾಡನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ಭಾಷಾಂತರಿಸಲು ಮುಂದಾಗಿದೆ. ಹಿಂದಿಗೆ ಪ್ರಭುಶಂಕರ್ ಪ್ರೇಮಿ, ತಮಿಳಿಗೆ ತಮಿಳ್ ಸೆಲ್ವಿ, ತೆಲುಗಿಗೆ ಡಾ.ಕೆ.ವೈ. ನಾರಾಯಣ ಸ್ವಾಮಿ ಹಾಗೂ ಮಲಯಾಳಂಗೆ ಮೋಹನ್ ಕುಂಟಾನ್ ಸಾಹಿತ್ಯವನ್ನು ಅನುವಾದಿಸಿದ್ದಾರೆ.

ನಾಲ್ಕೂ ಭಾಷೆಯ ಹಾಡಿಗೆ ಸಂಗೀತ ನೀಡುತ್ತಿರುವುದು ನಾದಬ್ರಹ್ಮ ಹಂಸಲೇಖ. ಕೆಲವೇ ದಿನಗಳಲ್ಲಿ ಎಲ್ಲ ಭಾಷೆಗಳಲ್ಲೂ ನೇಗಿಲ ಯೋಗಿಯ ಹಾಡು ಕೇಳಿ ಬರಲಿದೆ. 

Athiratha Movie Gallery

Rightbanner02_smuggler_inside

Uppu Huli Khara Movie Gallery