` ಭಾವನಾ ರಾವ್‍ಗೆ ಡಬ್ಕುಡಬಲ್ ಪಟಾಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
double release for bhavana rao
Bhavana Rao Image

ಭಾವನಾ ರಾವ್..ಗಾಳಿಪಟದ ಪಾವನಿಯಾಗಿ ತೆರೆಗೆ ಬಂದ ಭಾವನಾ ಅವರ ಹೊಸ ಸಿನಿಮಾ ತೆರೆಗೆ ಬಂದು ತುಂಬಾ ದಿನಗಳಾಗಿತ್ತು. ತಡೆದು ಬಂದ ಮಳೆ ಜಡಿದು ಬಂತು ಅನ್ನೋ ಹಾಗೆ, ಒಂದೇ ದಿನ ಅವರ ಎರಡು ಚಿತ್ರಗಳು ತೆರೆಗೆ ಅಪ್ಪಳಿಸಿವೆ.

ಸತ್ಯ ಹರಿಶ್ಚಂದ್ರ ಹಾಗೂ ದಯವಿಟ್ಟು ಗಮನಿಸಿ. ಎರಡೂ ಚಿತ್ರಗಳಲ್ಲಿ ಭಾವನಾ ಅವರದ್ದು ಪ್ರಮುಖ ಪಾತ್ರ. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ನಾಯಕನ ಸುಳ್ಳುಗಳನ್ನೆಲ್ಲ ನಂಬಿ, ಅವನನ್ನು ಹುಡುಕಿಕೊಂಡು ಅಲೆಯುವ ಹುಡುಗಿಯಾಗಿದ್ದರೆ, ದಯವಿಟ್ಟು ಗಮನಿಸಿ ಚಿತ್ರದಲ್ಲಿ ಸದಾ ನೋವಿನಲ್ಲೇ ನರಳುವ ಗೃಹಿಣಿಯಾಗಿ ನಟಿಸಿದ್ದಾರೆ. ದೀಪಾವಳಿ ಪಟಾಕಿ ಜೋರಾಗಿ ಸಿಡಿದು ಸುರುಸುರು ಬತ್ತಿಯಂತೆ ಬೆಳಗಲಿ.

 

Athiratha Movie Gallery

Rightbanner02_smuggler_inside

Uppu Huli Khara Movie Gallery