` ಅಭಿಷೇಕ್ ಅಂಬರೀಷ್ ಸ್ಪೀಕಿಂಗ್ ಫ್ರಂ ಬ್ಯಾಂಕಾಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
abhishek ambi speaks
Ambareesh, Abhi, Sumalatha Image

ಅಭಿಷೇಕ್ ಅಂಬರೀಷ್ ಬ್ಯಾಂಕಾಕ್‍ನಲ್ಲಿದ್ದಾರೆ. ಅಲ್ಲಿ ಅವರು ಮಿಕ್ಸೆಡ್ ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದಾರೆ. ಸುಮಾರು ಒಂದು ತಿಂಗಳಿಂದ ಅಲ್ಲಿಯೇ ಇರುವ ಅಭಿಷೇಕ್, ಸುದ್ದಿಯಾಗಿದ್ದು ಮಾತ್ರ ತಮ್ಮದಲ್ಲದ ತಪ್ಪಿನಿಂದ.

ಕನ್ನಡದ ಸುದ್ದಿ ವಾಹಿನಿಯೊಂದು ಆದಿಕೇಶವುಲು ಮೊಮ್ಮಗನ ಡ್ರಗ್ಸ್ ಆಕ್ಸಿಡೆಂಟ್ ಪ್ರಕರಣದಲ್ಲಿ ಅಭಿಷೇಕ್ ಕೂಡಾ ಅವರ ಕಾರ್‍ನಲ್ಲಿದ್ದರು ಎಂದು ಸುದ್ದಿ ಮಾಡಿಬಿಟ್ಟಿತು. ಆದರೆ, ಅಭಿಷೇಕ್ ಬ್ಯಾಂಕಾಕ್‍ನಲ್ಲಿದ್ದರು. ಒಂದು ತಿಂಗಳಿಂದ. ಸುಮಲತಾ ಮತ್ತು ಅಂಬರೀಷ್ ಅವರಂತೂ ಕೆಂಡಾಮಂಡಲವಾದರು. ಟಿವಿ ಚಾನೆಲ್‍ನವರಿಗೆ ಬುದ್ದಿ ಹೇಳಿದರು.

ಈಗ ಸ್ವತಃ ಅಭಿಷೇಕ್ ಬ್ಯಾಂಕಾಕ್‍ನಿಂದಲೇ ಮಾತನಾಡಿದ್ದಾರೆ. ಒಂದು ತಿಂಗಳಿಂದ ನಾನು ಬ್ಯಾಂಕಾಕ್‍ನಲ್ಲಿದ್ದೇನೆ. ಎಲ್ಲ ಡಿಸ್ಟರ್ಬೆನ್ಸ್‍ಗಳಿಂದ ಮುಕ್ತನಾಗಿ ಫೈಟಿಂಗ್, ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದೇನೆ. ನನ್ನ ಬಗ್ಗೆ ಬಂದ ಸುಳ್ಳು ಸುದ್ದಿ ನೋಡಿದೆ. ಬೇಸರವಾಯಿತು. ಅವರು ನಮ್ಮ ಕುರಿತ ಸುಳ್ಳು ಸುದ್ದಿಯನ್ನು 20 ಗಂಟೆ ಪ್ರಸಾರ ಮಾಡ್ತಾರೆ. ಸ್ಪಷ್ಟನೆಯನ್ನು ಒಂದು ನಿಮಿಷ ಹಾಕಿ ಕೈಬಿಡ್ತಾರೆ. ನಮ್ಮ ಜೀವನದ ಬಗ್ಗೆ ಗೌರವ ಬೇಡವೇ..? ಇದು ಅಭಿಷೇಕ್ ಕೇಳುತ್ತಿರುವ ಪ್ರಶ್ನೆ.

ಸ್ಟಾರ್ ದಂಪತಿಯ ಪುತ್ರನಾಗಿರುವ ಕಾರಣಕ್ಕೆ ಇದೆಲ್ಲವನ್ನೂ ಎದುರಿಸಬೇಕಾದ ಅನಿವಾರ್ಯತೆ ಅಭಿಷೇಕ್ ಅವರದ್ದು. ಸುದ್ದಿ ಬಂದಾಗ ಅಭಿಷೇಕ್‍ಗೆ ಸ್ವತಃ ಅಂಬರೀಷ್ ಮತ್ತು ಸುಮಲತಾ ಧೈರ್ಯ ಹೇಳಿದರಂತೆ. ನನ್ನ ತಂದೆ, ತಾಯಿ ನನಗೆ ಯಾವಾಗಲೂ ವಿಧೇಯನಾಗಿರು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿರುವುದು ಹೇಗೆ ಎಂದು ಕಲಿಸಿದ್ದಾರೆ. ನನ್ನಿಂದ ಅಂತಹ ತಪ್ಪುಗಳಾಗುವುದಿಲ್ಲ. ಇದು ಅಭಿಷೇಕ್ ಅಂಬರೀಷ್ ಸ್ಪಷ್ಟನೆ. 

ಬ್ಯಾಂಕಾಕ್‍ನಲ್ಲಿ ಹಗಲಿರುಳೂ ಬೆವರು ಸುರಿಸುತ್ತಿರುವ ಅಭಿಷೇಕ್, ಸಿನಿಮಾಗಾಗಿ ಕಾಯುತ್ತಿದ್ದಾರೆ. ಬಹುಶಃ, ಮುಂದಿನ ವರ್ಷ ಅಭಿಷೇಕ್ ಆಗಮನಕ್ಕೆ ಚಿತ್ರರಂದಲ್ಲೊಂದು ವೇದಿಕೆ ಸಿದ್ಧವಾಗಬಹುದು. 

Related Articles :-

ಮಕ್ಕಳ ಬಗ್ಗೆ ಸುಳ್ಳುಸುಳ್ಳೇ ಬರೆಯಬೇಡಿ - ಅಂಬರೀಷ್

#

16 Years To Majestic Gallery

Prema Baraha Success Meet Gallery