` ಕ್ರ್ಯಾಕ್ ನಂತರ, 786 ಮತ್ತು ರಗಡ್.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vinod in rugged and 786
Vinod Prabhakar Image

ರಗಡ್. ಇದು ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯಿಸುತ್ತಿರುವ ಹೊಸ ಚಿತ್ರ. ಕ್ರ್ಯಾಕ್ ಚಿತ್ರ ಜನಮೆಚ್ಚುಗೆ ಗಳಿಸಿದ್ದು, ವಿನೋದ್ ಪ್ರಭಾಕರ್ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ದರ್ಶನ್ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಅದು ಪಕ್ಕಾ ಆ್ಯಕ್ಷನ್ ಸಿನಿಮಾ. ಪ್ರೇಕ್ಷಕರಿಗೆ ಥ್ರಿಲ್ ನೀಡುವ ಅಂಶಗಳು ಚಿತ್ರದ ತುಂಬಾ ಇವೆ ಎಂದು ಖುಷಿಯಾಗಿದ್ದಾರೆ ವಿನೋದ್ ಪ್ರಭಾಕರ್.

ಇನ್ನು ವಿನೋದ್ ಪ್ರಭಾಕರ್ ಅಭಿನಯದ ಇನ್ನೊಂದು ಸಿನಿಮಾ 786. ಅದಕ್ಕೆ ಟ್ಯಾಗ್‍ಲೈನ್ ಹಿಂದೂಸ್ಥಾನ್ ಮೇರಾ ಜಾನ್. ಟೈಟಲ್ಲೇ ಹೇಳುವಂತೆ ಅದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ ಇರುವ ಚಿತ್ರ. ಆ ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Related Articles :-

Vinod Prabhakar's New Film Is Rugged

#

Smuggler Release Meet Gallery

Rightbanner02_tora_inside

Naanu Parvathi Book Launch Gallery