` ಅಂಬರೀಷ್ ಮಗ ಸಿನಿಮಾಗೆ ಬರೋಕೆ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ambareesh, sumalatha, abhi
Ambareesh, Sumalatha with their son Abhi

ಕನ್ನಡ ಚಿತ್ರರಂಗದ ಸ್ಟಾರ್ ನಟರ ಮಕ್ಕಳು, ನಿರ್ದೇಶಕ, ನಿರ್ಮಾಪಕರ ಮಕ್ಕಳು ಹೀರೋ ಆಗುವುದು ಹೊಸದೇನಲ್ಲ. ಈಗ ಆ ಲಿಸ್ಟ್‍ಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ ದಂಪತಿ ಪುತ್ರ ಅಭಿಷೇಕ್ ಗೌಡ. 

ಅಂಬರೀಷ್ ಮತ್ತು ಸುಮಲತಾ ಇಬ್ಬರಿಗೂ ಮಗ ಸಿನಿಮಾ ಫೀಲ್ಡಿಗೆ ಬರುವುದು ವೈಯಕ್ತಿಕವಾಗಿ ಅಷ್ಟೇನೂ ಇಷ್ಟವಿರಲಿಲ್ಲವಂತೆ. ಆದರೆ, ಮಗ ಸಿನಿಮಾದತ್ತಲೇ ಆಸಕ್ತಿ ತೋರಿಸಿದಾಗ ಆಕ್ಟಿಂಗ್ ಕೋರ್ಸ್ ಮಾಡಿಕೊಳ್ಳಲು ಸೂಚಿಸಿದರಂತೆ. ತಂದೆ, ತಾಯಿಯ ಹೆಸರಿಗಿಂತ, ಪ್ರತಿಭೆಯಿದ್ದರಷ್ಟೇ ಚಿತ್ರರಂಗದಲ್ಲಿ ಬೆಳೆಯೋಕೆ ಸಾಧ್ಯ ಎನ್ನುವುದು ಅಂಬರೀಷ್, ಸುಮಲತಾ ದಂಪತಿಗಳ ನಂಬಿಕೆ. ಒಟ್ಟಿನಲ್ಲಿ ಅಭಿಷೇಕ್ ಗೌಡ ಸಿನಿಮಾಗೆ ಬರೋಕೆ ತಯಾರಿ ಮಾಡಿಕೊಳ್ಳುತ್ತಿರುವುದಂತೂ ಹೌದು.

ಕಥೆ ಏನು..? ನಿರ್ದೇಶಕ ಯಾರು..? ನಿರ್ಮಾಪಕ ಯಾರು..? ನಾಯಕಿ ಯಾರು..? ಯಾವಾಗ ರಿಲೀಸ್..? ಇಂಥ ಪ್ರಶ್ನೆಗಳನ್ನೆಲ್ಲ ಕೇಳಲೇಬೇಡಿ. ಅವುಗಳಿಗಿನ್ನೂ ಉತ್ತರ ಸಿಕ್ಕಿಲ್ಲ.

Athiratha Movie Gallery

Rightbanner02_smuggler_inside

Mahanubhavaru PressMeet Gallery