` ವಿಡಿಯೋ ಆಲ್ಬಂನಲ್ಲಿ ಲೀಲಾ ಮಯೂರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mayuri in hindi video album
Mayuri Image

ಕೃಷ್ಣಲೀಲಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಮಯೂರಿ, ಇಷ್ಟಕಾಮ್ಯ ನಂತರ ತೆರೆ ಮೇಲೆ ಕಾಣಿಸಿಲ್ಲ. ಕರಿಯ-2, ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳಲ್ಲಿ ನಟಿಸಿದ್ದರೂ, ಅವುಗಳು ಇನ್ನೂ ರಿಲೀಸ್ ಆಗಿಲ್ಲ. ಈ ಗ್ಯಾಪ್‍ನಲ್ಲೇ ಮಯೂರಿ, ಗರ್ಲ್ ಅನ್ನೋ ವಿಡಿಯೋ ಆಲ್ಬಂನಲ್ಲಿ ನಟಿಸಿ ಬಂದಿದ್ದಾರೆ. ಮುಂಬೈ ಮೂಲಕ ವಿಶಾಲ್, ಅಭಿಷೇಕ್ ಎಂಬುವರು ಮಾಡಿರುವ ಹಿಂದಿ ಆಲ್ಬಂನಲ್ಲಿ ನಟಿಸಿದ್ದಾರೆ ಮಯೂರಿ.

ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಲಾಗಿರುವ ವಿಡಿಯೋ ಆಲ್ಬಂನ್ನು, ಬ್ಯಾಂಕಾಕ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಬರುತ್ತಿರುವ ವಿಡಿಯೋ ಆಲ್ಬಂನ ಟ್ರೇಲರ್ ಇದೇ ವಾರ ರಿಲೀಸ್ ಆಗುತ್ತಿದೆ.

Athiratha Movie Gallery

Rightbanner02_smuggler_inside

Mahanubhavaru PressMeet Gallery