` ಕಾಂಬಿನೇಷನ್ ಕೇಳಿದೆ, ಕಥೆ ಕೇಳಲಿಲ್ಲ - ಮುಗುಳುನಗೆ ನಿರ್ಮಾಪಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
syed salam
mugulunage producer Syed Salam

ಮುಗುಳುನಗೆ ನಿರ್ಮಾಪಕ ಸೈಯ್ಯದ್ ಸಲಾಂ. ಈ ಹಿಂದೆ ಲೈಫು ಇಷ್ಟೇನೆ ಚಿತ್ರಕ್ಕೆ ದುಡ್ಡು ಹಾಕಿದ್ದವರು. ಈ ಬಾರಿ ಮುಗುಳುನಗೆಗೂ ಬಂಡವಾಳ ಹೂಡಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕರು ಕಥೆ ಕೇಳಿ ಹಣ ಹಾಕಿದರೆ, ಸೈಯ್ಯದ್ ಸಲಾಂ ಡಿಫರೆಂಟ್. ಅವರು ಕಾಂಬಿನೇಷನ್ ಕೇಳಿದ ತಕ್ಷಣ ಸಿನಿಮಾ ನಿರ್ಮಾಣಕ್ಕೆ ಓಕೆ ಎಂದರಂತೆ. ಹಾಗೆಂದು ಅವರು ಕಥೆಯನ್ನು ಕೇಳುವುದೇ ಇಲ್ಲ ಎಂದುಕೊಂಡರೆ, ಅದು ತಪ್ಪಾದೀತು.

ಭಟ್ಟರು ಗಣೇಶ್ ಕಾಂಬಿನೇಷನ್ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ನಂಬಿಕೆ ಮತ್ತು ಅವರು ಒಳ್ಳೆಯ ಚಿತ್ರ ಕೊಟ್ಟೇ ಕೊಡುತ್ತಾರೆ ಎನ್ನುವ ಭರವಸೆಯಷ್ಟೇ ಹಾಗೆ ಮಾಡಲು ಕಾರಣ ಎನ್ನುತ್ತಾರೆ ಸೈಯ್ಯದ್. 

ಚಿತ್ರ ಇದೇ ಶುಕ್ರವಾರ, 275ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದ ಸೈಯದ್, ಥಿಯೇಟರ್ ಮಾಲೀಕರ ಒತ್ತಾಯದ ಮೇರೆಗೆ 275 ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಗೆದ್ದರೆ, ಗಣೇಶ್-ಭಟ್ಟರ ಜೋಡಿಗೆ ಹ್ಯಾಟ್ರಿಕ್ ಸಾಧನೆಯಾಗಲಿದೆ.

Raju Kannada Medium Movie Gallery

Choorikatte Movie Gallery