` ``ರವಿಚಂದ್ರನ್ ಮಗ ಅಂದ್ರೇನ್ ಎರಡು ಕೊಂಬಿರುತ್ತಾ..?'' - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
saheba's son simplicity
Manoranjan Ravichandran Image

ರವಿಚಂದ್ರನ್ ಮಗ ಮನೋರಂಜನ್ ಅಭಿನಯದ ಸಾಹೇಬ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ಇದೇ ಶುಕ್ರವಾರ ರಿಲೀಸ್ ಕೂಡಾ ಆಗ್ತಿದೆ. ಚಿತ್ರತಂಡದವರು ಹೇಳೋ ಪ್ರಕಾರ, ಮನೋರಂಜನ್‍ಗೆ ತಾನು ರವಿಚಂದ್ರನ್ ಮಗ ಅನ್ನೋ ಅಹಂ ಇಲ್ಲ. ಎಲ್ಲರೊಂದಿಗೆ ಸಿಂಪಲ್ಲಾಗಿ ಬೆರೀತಾರೆ. ಇದಕ್ಕೆ ಕಾರಣ ಏನು ಅಂಥಾ ಕೇಳಿದಾಗ ಕೇಳಿಸಿದ್ದೇ ಇದು, ರವಿಚಂದ್ರನ್ ಮಗ ಅಂದ್ರೇನ್ ಎರಡು ಕೊಂಬಿರುತ್ತಾ..?

ಈ ಡೈಲಾಗ್‍ನ್ನು ಮನೋರಂಜನ್‍ಗೆ ಪದೇ ಪದೇ ಹೇಳುತ್ತಿದ್ದವರು ಅವರ ತಾಯಿ. ಸ್ಕೂಲಿನಲ್ಲಿ ಜೊತೆಯಲ್ಲಿದ್ದ ಹುಡುಗರೆಲ್ಲ ರವಿಚಂದ್ರನ್ ಮಕ್ಕಳು ಎಂದು ನೋಡುತ್ತಿದ್ದರೆ, ರವಿಚಂದ್ರನ್ ಪತ್ನಿ ಮಕ್ಕಳಿಗೆ ಈ ರೀತಿ ಹೇಳುತ್ತಿದ್ದರಂತೆ. ಅಮ್ಮ ಹೇಳುತ್ತಿದ್ದ ಆ ಮಾತು, ನಾವು ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಯಿತು. ಸ್ಟಾರ್ ಮಕ್ಕಳು ಎಂಬ ಅಹಂಕಾರವನ್ನು ತಲೆಗೆ ಹತ್ತಲು ಬಿಡಲಿಲ್ಲ ಎಂದು ನೆನಪಿಸಿಕೊಳ್ತಾರೆ ಮನೋರಂಜನ್.

ಸಾಹೇಬ ಚಿತ್ರದ ಬಗ್ಗೆಯಂತೂ ಮನೋರಂಜನ್‍ಗೆ ತುಂಬಾ ನಿರೀಕ್ಷೆಗಳಿವೆ. ಚಿತ್ರತಂಡದ ಹಲವರು 1980ರ ರವಿಚಂದ್ರನ್ ಥರಾ ಕಾಣಿಸ್ತೀರಿ ಎಂದಾಗ, ಖುಷಿಯೂ ಆಗುತ್ತೆ. ಭಯವೂ ಆಗುತ್ತೆ ಅಂತಾರೆ ಮನೋರಂಜನ್. 

ಪ್ರತಿವರ್ಷ ಚಿತ್ರರಂಗಕ್ಕೆ ಹೊಸಬರು ಬರ್ತಾನೇ ಇರ್ತಾರೆ. ಆದರೆ, ಚಿತ್ರರಂಗಕ್ಕೇ ಹೊಸತನ ಕೊಟ್ಟ ರವಿಚಂದ್ರನ್ ಪುತ್ರ ಬರುತ್ತಿರುವುದು ಸಂಪೂರ್ಣ ವಿಶೇಷ. ಹೀಗಾಗಿಯೇ ಈ ಹೊಸ ಎಂಟ್ರಿ ಇಷ್ಟು ದೊಡ್ಡದಾಗಿ ಸದ್ದು ಮಾಡ್ತಿದೆ.

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery