` ಹೀರೋಯಿನ್‍ಗೆ ಆಕ್ಸಿಡೆಂಟ್ ಆದರೆ ಸಿನಿಮಾ ಹಿಟ್ ಆಗುತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika chethan special experience
Radhika Chethan Image

ಇದು ನಿಜವೋ.. ಸುಳ್ಳೋ.. ನಂಬಿಕೆಯೋ.. ಮೂಢನಂಬಿಕೆಯೋ.. ಹೇಳೋಕಾಗಲ್ಲ. ಕಾಕತಾಳೀಯವಂತೂ ಹೌದು. ಇಂಥಾದ್ದೊಂದು ಪ್ರಶ್ನೆ ಎದುರಾಗಿರೋದು ರಾಧಿಕಾ ಚೇತನ್‍ಗೆ. ರಂಗಿತರಂಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಚೇತನ್, ನಟಿಸಿರೋದು ಬೆರಳೆಣಿಕೆಯ ಚಿತ್ರಗಳಲ್ಲಿ. 

ವಿಶೇಷವೆಂದರೆ, ಅವರು ನಟಿಸಿದ ಚಿತ್ರಗಳಲ್ಲಿ ಎರಡು ಸೂಪರ್ ಹಿಟ್. ರಂಗಿತರಂಗ ಮತ್ತು ಯು ಟರ್ನ್. ವಿಶೇಷವೆಂದರೆ, ಎರಡೂ ಚಿತ್ರಗಳಲ್ಲಿ ರಾಧಿಕಾ ಚೇತನ್ ಪಾತ್ರಕ್ಕೆ ಆಕ್ಸಿಡೆಂಟ್ ಆಗುತ್ತೆ. ಮತ್ತೊಂದು ಚಿತ್ರ ಬಿಬಿ5.  ಆ ಚಿತ್ರದಲ್ಲಿ ಆಕ್ಸಿಡೆಂಟ್ ಆಗಿರಲಿಲ್ಲ. ಈಗ ಮತ್ತೊಂದು ಚಿತ್ರ ಕಾಫಿತೋಟ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಆಕ್ಸಿಡೆಂಟ್ ಆಗುತ್ತಾ..:? ಎಂದರೆ ರಾಧಿಕಾ ನಗುತ್ತಲೇ ಚಿತ್ರ ನೋಡಿ ಎನ್ನುತ್ತಾರೆ.

ಟಿ.ಎನ್. ಸೀತಾರಾಮ್ ನಿರ್ದೇಶನದ ಕಾಫಿತೋಟ ಚಿತ್ರದಲ್ಲಿ ರಾಧಿಕಾ ಚೇತನ್ ಅವರದ್ದು ಕಾಫಿ ಎಸ್ಟೇಟ್ ಓನರ್ ಪಾತ್ರ. ಹಾರರ್, ಥ್ರಿಲ್ಲರ್ ಕಥೆಯ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ.

#

16 Years To Majestic Gallery

Prema Baraha Success Meet Gallery