` ಸೀತಾರಾಮ್ `ಕಾಪಿತೋಟ'ದಲ್ಲಿ ಏನ್ ಬೇಕಾದ್ರೂ ಆಗಬಹುದು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kaafi thotha image
Kaafi Thota stars

ಪ್ರಖ್ಯಾತ ವಕೀಲರ ಹೇಳಿ ಎಂದು ಜನಸಾಮಾನ್ಯರ ಎದುರು ಪ್ರಶ್ನೆಯಿಟ್ಟರೆ, ಕೆಲವು ಹೆಸರುಗಳು ಸುಳಿದು ಹೋಗುತ್ತವೆ. ಫಾಲಿ ನಾರಿಮನ್, ರಾಮ್ ಜೇಠ್ಮಲಾನಿ, ಅರುಣ್ ಜೇಟ್ಲಿ, ಮೋಹನ್ ಕಾತರಕಿ, ನಾಗೇಶ್, ಸಿ.ಹೆಚ್. ಹನುಮಂತರಾಯ.. ಮತ್ತು ಮಿಸ್ಸೇ ಆಗದೆ ಸಿಎಸ್‍ಪಿ. ತಮ್ಮದೇ ಸೀರಿಯಲ್ಲುಗಳಲ್ಲಿ ವಕೀಲನ ಪಾತ್ರ ಮಾಡುತ್ತಾ ಮಾಡುತ್ತಾ ಟಿಎನ್ ಸೀತಾರಾಂ ಲಾಯರ್ ಆಗಿ ಫೇಮಸ್ ಆಗಿಬಿಟ್ಟರು. ಕೋರ್ಟುಗಳಲ್ಲಿ ಮ್ಯಾಜಿಕ್ ಮಾಡುತ್ತಾರೋ.. ಇಲ್ಲವೋ.. ಕ್ಯಾಮೆರಾ ಹಿಂದಂತೂ ಮ್ಯಾಜಿಕ್ ಮಾಡಿದ್ದಾರೆ.

ಸೀತಾರಾಮ್ ನಿರ್ದೇಶನದ ಹೊಸ ಚಿತ್ರ ಕಾಫಿತೋಟ ತೆರೆಗೆ ಬರೋಕೆ ಸಿದ್ಧವಾಗಿದೆ. ಸಾಮಾನ್ಯವಾಗಿ ಸೀತಾರಾಮ್ ಚಿತ್ರಗಳಲ್ಲಿ ರಾಜಕೀಯ, ಜೀವನ, ಬಡತನ, ವಿಡಂಬನೆ, ಬಂಡಾಯ.. ಹೀಗೆ ಹಲವು ವಿಚಾರಧಾರೆಗಳಿರುತ್ವೆ. ಆದರೆ, ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರೋದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು. ಆ ಕಥೆಯಲ್ಲೂ ಅವರ ಎಂದಿನ ಟ್ರಂಪ್ ಕಾರ್ಡ್ ಇದ್ದೇ ಇರುತ್ತವೆ ಎಂದಿದ್ದಾರೆ ಸೀತಾರಾಮ್. ಸಸ್ಪೆನ್ಸ್‍ಗೂ, ವಿಡಂಬನೆಗೂ, ಥ್ರಿಲ್ಲರ್‍ಗೂ ರಾಜಕೀಯ ಸಂದೇಶಕ್ಕೂ ಸೀತಾರಾಮ್ ಯಾವ ರೀತಿ ಲಿಂಕ್ ಮಾಡಿರಬಹುದು...? ಇನ್ನೇನು ಸ್ವಲ್ಪ ದಿನ ಅಷ್ಟೆ. ಸಿನಿಮಾದಲ್ಲಿ ಉತ್ತರ ಹೇಳುತ್ತಾರೆ ಟಿ.ಎನ್. ಸೀತಾರಾಮ್.

Related Articles :-

Kaafi Thota Teaser Today

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery