` gaalib, - chitraloka.com | Kannada Movie News, Reviews | Image

gaalib,

  • ಉಗ್ರಗಾಮಿಯ ಪತ್ನಿಯಾಗಿ ರಾಮಾಯಣದ ಸೀತೆ

    deepika in gaalib

    ದೀಪಿಕಾ ಚಿಕ್ಲಿಯಾ. ಹಾಗೆಂದರೆ ಯಾರೀಕೆ ಅಂತೀರೇನೋ.. ರಾಮಾಯಣದ ಸೀತೆ ಎಂದರೆ ಥಟ್ಟನೆ ನೆನಪಾಗ್ತಾರೆ. ಇಂದ್ರಜಿತ್ ಚಿತ್ರದಲ್ಲಿ ಅಂಬರೀಷ್‍ಗೆ ಜೋಡಿಯಾಗಿದ್ದ, ಹೊಸ ಜೀವನ ಚಿತ್ರದಲ್ಲಿ ಶಂಕರ್‍ನಾಗ್‍ಗೆ ಜೋಡಿಯಾಗಿದ್ದವರು ಇದೇ ದೀಪಿಕಾ. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಸೀತೆಯಾಗಿ ನಟಿಸಿದ್ದ ದೀಪಿಕಾ, ಕನ್ನಡದವರಿಗೆ ಈ ಎರಡು ಸಿನಿಮಾಗಳ ಮೂಲಕ ಚಿರಪರಿಚಿತೆ. ನಟಿಯಾಗಿ, ರಾಜಕಾರಣಿಯಾಗಿ ಹೆಸರು ಮಾಡಿದ್ದ ದೀಪಿಕಾ, ಈಗ 24 ವರ್ಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ.

    ಹಾಗೆಂದು ಆಕೆ ಕನ್ನಡದಲ್ಲೇನೂ ಅಭಿನಯಿಸುತ್ತಿಲ್ಲ. ಹಿಂದಿಯ ಗಾಲಿಬ್ ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ, ಚಿತ್ರದಲ್ಲಿ ಉಗ್ರಗಾಮಿಯೊಬ್ಬನ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಉಗ್ರಗಾಮಿಯೊಬ್ಬ ಸತ್ತ ಮೇಲೆ ಆತನ ಕುಟುಂಬದ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಚಿತ್ರದ ಕಥೆ. ಕಥೆಯಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಫ್ಜಲ್ ಗುರು ಜೀವನದ ಕಥೆ ಇರುತ್ತದೆ ಎನ್ನಲಾಗುತ್ತಿದೆ. 

    24 ವರ್ಷಗಳ ಹಿಂದೆ ಬಣ್ಣ ಹಚ್ಚಿದ್ದ ದೀಪಿಕಾಗೆ ಚಿತ್ರರಂಗದಲ್ಲಿ ಯಶಸ್ಸು ಸಿಕ್ಕಿದ್ದುದು ಕನ್ನಡದಲ್ಲಿ ಮಾತ್ರ. ಉಳಿದಂತೆ ದೀಪಿಕಾ ಇಂದಿಗೂ ಸೀತೆಯ ಪಾತ್ರದಿಂದಷ್ಟೇ ಪರಿಚಿತರು. 

Raju Kannada Medium Movie Gallery

Choorikatte Movie Gallery