` bigboss5 - chitraloka.com | Kannada Movie News, Reviews | Image

bigboss5

 • Big Boss 5 To Be Aired In Colors Super

  vig boss 5

  Kannada television's hugely popular reality show 'Big Boss 5' is all set to be aired from the 15th of this month. This time the show will be aired in Colors Super instead of Colors Kannada.

  Yes, there is a major change in the schedule this time. In the last seasons, the programme was being aired in Colors Kananda. This time it has been shifted to Colors Super. The programme will be aired from 8 to 9 instead of 9 to 10. Another major change is common man will also participate in this programme along with celebrities.

  Last time, Sudeep had cooked for the contestants. This time, it is being said that he will be cooking on every Sunday.

 • ಕಿಚ್ಚ ಸುದೀಪ್ 5 ವರ್ಷ ಚಿಕ್ಕವರಾಗಿದ್ದಾರಂತೆ..!

  big boss 5

  ಕಿಚ್ಚ ಸುದೀಪ್ ಕನ್ನಡದ ಸ್ಮಾರ್ಟ್ ಹೀರೋ. ಅದನ್ನು ಅವರ ಮಹಿಳಾ ಅಭಿಮಾನಿಗಳಂತೂ ಇನ್ನೂ ಪ್ರೀತಿಯಿಂದ ಹೇಳ್ತಾರೆ. ಆದರೆ, ಈ ಬಾರಿ ಆ ಮಾತು ಹೇಳಿರೋದು ಬಿಗ್‍ಬಾಸ್ ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್. ಬಿಗ್‍ಬಾಸ್ 5ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಆವೃತ್ತಿಯಲ್ಲಿ ಸುದೀಪ್ ಅವರ ಹೇರ್‍ಸ್ಟೈಲ್ ತುಂಬಾನೇ ಡಿಫರೆಂಟಾಗಿದೆಯಂತೆ. ಪ್ರತಿ ಆವೃತ್ತಿಗೂ ಸುದೀಪ್ ಭಿನ್ನ ಭಿನ್ನ ಗೆಟಪ್‍ಗಳಲ್ಲಿ ಕಾಣಿಸಿಕೊಳ್ತಾರೆ. ಈ ಬಾರಿಯ ಅವರ ಹೇರ್‍ಸ್ಟೈಲ್ ದಿ ಬೆಸ್ಟ್ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

  ಬಿಗ್‍ಬಾಸ್ ನಿರ್ದೇಶಕರಿಗೆ ಇಷ್ಟವಾಗಿರೋದು ಸುದೀಪ್ ಅವರ ಕಮಿಟ್‍ಮೆಂಟ್. ಸ್ಯಾಂಡಲ್‍ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಹಾಲಿವುಡ್‍ಗಳಲ್ಲಿ ಏಕಕಾಲಕ್ಕೆ ಬ್ಯುಸಿಯಾಗಿರುವ ಸುದೀಪ್, ಬಿಗ್‍ಬಾಸ್‍ಗೆ ಪ್ರತಿ ವಾರದ ಶನಿವಾರ ಡೇಟ್ಸ್ ಕೊಟ್ಟಿದ್ದಾರೆ. ಶನಿವಾರ ರೆಕಾರ್ಡಿಂಗ್ ಎಂದರೆ, ಹಿಂದಿನ ರಾತ್ರಿ ನಿದ್ದೆಗೆಡಲೇಬೇಕು. ಬಿಗ್‍ಬಾಸ್‍ನ ಎಲ್ಲ ಎಪಿಸೋಡ್‍ಗಳನ್ನೂ ನೋಡಬೇಕು. ನಂತರ ರೆಕಾರ್ಡಿಂಗ್. ಅದನ್ನು ಸ್ಕ್ರೀನ್ ಮೇಲೆ ಎಲ್ಲಿಯೂ ಕಾಣಿಸದಂತೆ ನೋಡಿಕೊಳ್ಳುವುದು ಸುದೀಪ್ ಅವರ ಗುಣ.

  ಸುದೀಪ್ ಎತ್ತರದ ನಟ. 6.2 ಅಡಿ ಎತ್ತರದ ಸುದೀಪ್‍ಗೆ ಅದ್ಭುತವಾದ ಧ್ವನಿಯೂ ಇದೆ. ಆಟಗಾರ, ಗಾಯಕ, ನಿರ್ದೇಶಕ..ಎಲ್ಲಕ್ಕಿಂತ ಮಿಗಿಲಾಗಿ ಅಪರೂಪದ ವ್ಯಕ್ತಿತ್ವ. ಅವರ ಜೊತೆ ಕೆಲಸ ಮಾಡುವುದು ಖುಷಿ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

  ಎಲ್ಲ ಓಕೆ.. ಸುದೀಪ್ ಇನ್ನೂ 5 ವರ್ಷ ಚಿಕ್ಕವರಾದ್ರೆ ಹೇಗೆ ಕಾಣ್ತಾರೆ..? ಅಭಿಮಾನಿಗಳ ಕುತೂಹಲಕ್ಕೆ ಉತ್ತರ.. ಕೆಲವೇ ದಿನಗಳಲ್ಲಿ.

 • ನಿವೇದಿತಾ ಗೌಡ ಮೊದಲ ದಿನವೇ ಹೊರಬರುತ್ತಾರಾ..?

  big boss contestant niveditha gowda

  ನಿವೇದಿತಾ ಗೌಡ ಎಂಬ ಈ 18ರ ಬಾಲೆ, ಈಗ ಬಿಗ್​ಬಾಸ್ ಸ್ಪರ್ಧಿ. ಬಿಗ್​ಬಾಸ್ ಸ್ಪರ್ಧಿಗಳಲ್ಲೇ ಅತಿ ಚಿಕ್ಕ ವಯಸ್ಸಿನ ಹುಡುಗಿ, ಹುಟ್ಟಿದ್ದು, ಬೆಳೆದಿದ್ದು ಓದಿದ್ದು ಮೈಸೂರಿನಲ್ಲೇ ಆದರೂ ಸರಿಯಾಗಿ ಕನ್ನಡ ಮಾತನಾಡೋಕೆ ಬರಲ್ಲ. ಹೀಗಾಗಿ ಈಕೆಯ ಕನ್ನಡ ಕಂಗ್ಲಿಷ್ ಆಗಿಹೋಗಿದೆ. ಜಾಲತಾಣಗಳಲ್ಲಂತೂ ನಿವೇದಿತಾ ಗೌಡರನ್ನು ಸಂಜನಾ ಟ್ವಿನ್ ಅಂತಾನೇ ಕರೀತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ನಿವೇದಿತಾ ಗೌಡ.

  ಅರ್ಧಗಂಟೆಗೊಮ್ಮೆ ಬಟ್ಟೆ ಬದಲಾಯಿಸುವುದು ಈಕೆಯ ಹವ್ಯಾಸವಂತೆ. ಅಡುಗೆ ಬರಲ್ಲ. ಡಬ್​ಸ್ಮ್ಯಾಶ್ ಅಂದ್ರೆ ತುಂಬಾನೇ ಇಷ್ಟ. ಹೀಗಿರುವ ನಿವೇದಿತಾ, ಬಿಗ್​ಬಾಸ್ ಮನೆಯ ಬಾರ್ಬಿ ಡಾಲ್. ಅದೇ ರೀತಿಯ ಡ್ರೆಸ್​ನಲ್ಲಿ ಬಂದಿದ್ದ ನಿವೇದಿತಾರ ಕನ್ನಡ ವೀಕ್ಷಕರನ್ನು ಸುಸ್ತು ಹೊಡೆಸಿರುವುದು ಸುಳ್ಳಲ್ಲ.

  ಈ ನಿವೇದಿತಾ ಗೌಡ, ಮೊದಲ ದಿನವೇ ಎವಿಕ್ಷನ್​ಗೊಳಗಾಗುತ್ತಾರಾ..? ಅಂದರೆ, ಹೊರಹಾಕಲ್ಪಡುತ್ತಾರಾ..? ಅಂಥದ್ದೊಂದು ಕುತೂಹಲ ಹುಟ್ಟಿಸಿರುವುದು ಪರಮೇಶ್ವರ್ ಗುಂಡ್ಕಲ್ ಅವರ ಇನ್​ಸ್ಟಾಗ್ರಾಮ್ ಸ್ಟೇಟಸ್. ಬಹುಶಃ, ಹಾಗಾಗದೇ ಇರಬಹುದು. ಆದರೆ, ಅದು ಬಿಗ್​ಬಾಸ್ ಹೌಸ್. ಆದರೂ ಆಗಬಹುದು. ಒಟ್ಟಿನಲ್ಲಿ ಬಿಗ್​ಮನೆಯಲ್ಲಿ ಮೊದಲ ದಿನವೇ ಭರಪೂರ ಮನರಂಜನೆಯಂತೂ ಕಾದಿದೆ.

   

 • ಬಿಗ್ ಹೌಸ್‍ಗೆ ವಿಜಯಲಕ್ಷ್ಮಿ, ಚಂದನ್ ಶೆಟ್ಟಿ ಮತ್ತು...

  big boss 5 enteries are

  ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ರ್ಯಾಪ್ ಸಂಗೀತಗಾರ ಚಂದನ್ ಶೆಟ್ಟಿ, ಸಿಹಿಕಹಿ ಚಂದ್ರು, ರಾಜೇಶ್ ನಟರಂಗ, ಕಿರುತೆರೆ ಕಲಾವಿದರಾದ ಕವಿತಾ ಗೌಡ, ವರ್ಷಿಣಿ ಕುಸುಮಾ, ಗಾಯಕಿಯರಾದ ಅನುರಾಧ್ ಅಥವಾ ಸುಪ್ರಿಯಾ ಲೋಹಿತ್, ಆರ್‍ಜೆ ರಿಯಾಜ್.. ಹೀಗೆ ಪಟ್ಟಿ ದೊಡ್ಡದಾಗಿದೆ. ಇವರೆಲ್ಲ ಈ ಬಾರಿಯ ಬಿಗ್‍ಬಾಸ್ ಮನೆಯಲ್ಲಿ ಎದುರಾಗಬಹುದು. 

  ಇವರ ಹೆಸರುಗಳೆಲ್ಲ ಅಂತಿಮಗೊಂಡಿದೆ ಎಂಬ ಸುದ್ದಿಯಿದೆಯಾದರೂ, ಅಧಿಕೃತವಾಗೋದು ಬಿಗ್‍ಬಾಸ್ ಶುರುವಾದ ದಿನವೇ. ಅಂದಹಾಗೆ ಈ ಬಾರಿಯ ಬಿಗ್‍ಬಾಸ್‍ನಲ್ಲಿ ಕಿಚ್ಚನ ಇನ್ನೊಂದು ಝಲಕ್ ಕೂಡಾ ಇದೆ. ಸುದೀಪ್ ಈ ಬಾರಿ ಆಗಾಗ್ಗೆ ಬಿಗ್‍ಹೌಸ್‍ನ ಅಡುಗೆ ಮನೆಗೂ ಎಂಟ್ರಿ ಕೊಡ್ತಾ ಇರ್ತಾರಂತೆ. ಸುದೀಪ್ ಅಡುಗೆಯ ಟೇಸ್ಟ್ ನೋಡೋದು ಮಾತ್ರ ಬಿಗ್‍ಬಾಸ್ ಮನೆಯವರು. ವೀಕ್ಷಕರಿಗೇನಿದ್ದರೂ ನಾಲಿಗೆ ಚಪ್ಪರಿಸುವ ಕೆಲಸವಷ್ಟೇ.

 • ಸಿನಿಮಾ ಇನ್ ಟಾಕೀಸ್.. ಡೈರೆಕ್ಟರ್ ಇನ್ ಬಿಗ್‍ಬಾಸ್

  cinema in theater, dayal in big boss

  ಸತ್ಯ ಹರಿಶ್ಚಂದ್ರ. ಈತ ಮೊದಲೇ ಸುಳ್ಳು ಹೇಳೋ ಸತ್ಯ ಹರಿಶ್ಚಂದ್ರ. ಶರಣ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಅಭಿನಯದ ಸತ್ಯ ಹರಿಶ್ಚಂದ್ರ ಇವತ್ತೇ ಥಿಯೇಟರಿಗೆ ಕಾಲಿಟ್ಟಿದೆ. ಆದರೆ, ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭ್ ಇಲ್ಲಿಲ್ಲ. 

  ದಯಾಳ್, ಬಿಗ್‍ಬಾಸ್ ಮನೆ ಸೇರಿದ್ದಾರೆ. ನಿರ್ದೇಶಕರೇ ಇಲ್ಲದೆ ಚಿತ್ರದ ಪ್ರಚಾರ ಮಾಡುತ್ತಿದೆ ಚಿತ್ರತಂಡ. ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟು, ಚಿತ್ರವನ್ನು ಥಿಯೇಟರಿಗೆ ಸೇರಿಸುವವರೆಗೂ ಕೆಲಸ ಮಾಡಿದ್ದ ದಯಾಳ್, ಸಿನಿಮಾ ರಿಲೀಸ್ ಆಗುವ ಕೆಲವೇ ದಿನಗಳ ಮುನ್ನ ಬಿಗ್‍ಬಾಸ್ ಮನೆ ಸೇರಿದ್ದಾರೆ. 

  ಹಾಗೆಂದು ಚಿತ್ರಕ್ಕೇನೂ ಸಮಸ್ಯೆಯಾಗಿಲ್ಲ. ಚಿತ್ರ ಒಂದು ಹವಾ ಎಬ್ಬಿಸಿದೆ. ಥಿಯೇಟರಿಗೆ ನುಗ್ಗುತ್ತಿದೆ. ಪ್ರೇಕ್ಷಕರು ಥಯ್ಯಕುದಾ.. ಥಕತಯ್ಯೇ ಕುದಾ ಅನ್ನಬೇಕಷ್ಟೆ..

 • ಸ್ಟಾರ್ ಆಗ್ಬುಟ್ರು ನಿವೇಡಿಟಾ ಗೌಡ

  big boss 5 contestant Gowda

  ನೀವು ಓದ್ತಾ ಇರೋದು ಸರಿಯಾಗೇ ಇದೆ. ಅದು ನಿವೇದಿತಾ ಗೌಡ ಅಲ್ಲ. ನಿವೇಡಿಟಾ ಗೌಡ. ಅದು ಫೇಮಸ್ ಆಗಿದ್ದು ಆಕೆಯ ಕಂಗ್ಲಿಷ್‍ನಿಂದ. ಬಿಗ್‍ಬಾಸ್ ಮನೆ ಸೇರಿದವರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಹುಡುಗಿ ಈ ನಿವೇದಿತಾ ಗೌಡ. ಮೈಸೂರಿನ ಹುಡುಗಿ. ಬಿಸಿಎ ಓದುತ್ತಿರುವ ಈ ಬಾರ್ಬಿ ಡಾಲ್, ಎಕ್ಸಾಂನ್ನೂ ಬಿಟ್ಟು ಬಿಗ್‍ಬಾಸ್‍ಗೆ ಸೇರಿದ್ದಾರೆ. 

  ತಮ್ಮ ಚಿತ್ರ ವಿಚಿತ್ರ ಕನ್ನಡದಿಂದಾಗಿ ಟ್ರೋಲ್ ಆದ ನಿವೇದಿತಾ, ಆ ಟ್ರೋಲ್‍ಗಳಿಂದಾನೆ ಸ್ಟಾರ್ ಕೂಡಾ ಆಗಿಬಿಟ್ಟಿದ್ದಾರೆ. ನಂಬ್ತೀರೋ ಇಲ್ವೋ... ಈಕೆಯ ಹೆಸರಲ್ಲಿ ಐದಾರು ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಆಕೆ ಇಂಗ್ಲಿಷ್ ಆಕ್ಸೆಂಟ್‍ನಲ್ಲಿ ಕನ್ನಡ ಮಾತನಾಡುವುದನ್ನು ನೋಡುವುದೇ ಒಂದು ಚೆಂದ. ಕೆಲವರು ಅದನ್ನು ಎಂಜಾಯ್ ಮಾಡಿದರೆ, ಇನ್ನೂ ಕೆಲವರು ಲೇವಡಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದ, ಗೌಡರ ಹುಡುಗಿಗೆ ಸರಿಯಾಗಿ  ಕನ್ನಡ ಬರಲ್ಲ ಅಂದ್ರೆ ಹೆಂಗೆ ಅನ್ನೋದು ಟ್ರೋಲ್ ಮಾಡೋವ್ರ ವಾದ. 

  ಆದರೆ ಅವರ ತಾಯಿ ಹೇಮಾ ಹೇಳೋದೇ ಬೇರೆ. ಅವಳು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಹಾಗೆಯೇ ಮಾತನಾಡ್ತಾ ಇದ್ಲು. ನಮಗೂ ಖುಷಿ ಕೊಡ್ತಿತ್ತು. ಅದಾದ ಮೇಲೆ ಅದನ್ನು ನಾವು ತಿದ್ದೋಕೆ ಹೋಗಲಿಲ್ಲ. ಅವಳೂ ಹಾಗೆಯೇ ಇದ್ದುಬಿಟ್ಟಳು. ಅಷ್ಟೆ. ನಂಗೆ ನಿಮ್ಮ ಥರ ಮಾತನಾಡೋಕೆ ಆಗಲ್ಲ ಮಮ್ಮಿ ಅಂಥಾಳೆ. ಏನ್ ಮಾಡೋದು. ಅದಕ್ಕೆಲ್ಲ ಅವಳನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಆಕೆಯ ತಾಯಿ.

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery