` 3 gante 30 days 30 seconds, - chitraloka.com | Kannada Movie News, Reviews | Image

3 gante 30 days 30 seconds,

 • 3 Gante 30 Days 30 Seconds Shooting Complete

  3 gante 30 days 30 seconds shooting complete

  The shooting of the film 3 Gante 30 Dina 30 Seconds starring Aru Gowda and Kavya Shetty is complete. The film is now on the editing table sources confirmed.  Aru Gowda who made his debut in Muddu Manase plays an advocate in 3 Gante 30 Dina 30 Seconds'.

  3gante_stills.jpg

  It is a thriller directed by new director GK Madhusudhan. Chandrashekhar R Padmashali is the producer. The film has music by Sridhar R Sambhram and Sri CrzayMindz is the editor. Devaraj, Sudharani, Chandrashekar (Edakau Gudda) are playing important roles in the film. 

 • 3 Gante 30 Dina 30 Second Audio Is A Hit

  3 gante 30 dina 30 second

  Sridhar Sambhram has another hit album in his kitty. The audio of the film 3 Gante 30 Dina 30 Second has become a big hit. The songs were released last week and have garnered very good response from the audience.

  Jayant Kaikini's lines for the songs have jelled well with Sambhram's tunes. The film has Aru Gowda and Kavya Shetty in the lead roles. The film is directed by newcomer GK Madhusudhan. Chandan Shetty has sung the title track of the film which has become a sensation with nearly 8 lakh views on a single online platform.

 • 3 Gante 30 Dina 30 Second Songs Released

  3 gante 30 dina audio launched by hamsalekha

  The songs of '3 Gante 30 Dhina 30 Second' was released in a grand function held at the  Chowdaiah Memorial Hall in Bangalore. Music director Hamsalekha released the songs of the film.

  The event was attended by many celebrities from the Kannada film industry including senior directors Bhagawan, Bhargava, Joe Simon, Sunil Kumar Desai, producers Umesh Banakar, Soorappa Babu and others.

  '3 Gante 30 Dhina 30 Second' is being produced by Brain Share Creations Private Limited and is directed by G K Madhusudhan. The film stars Aru Gowda, Kavya Shetty and others in prominent roles. Sridhar Sambhram is the music director.

  Related Articles :-

  3 Gante 30 Days 30 Seconds Shooting Complete

 • 3 ಗಂಟೆ 30 ನಿಮಿಷ 30 ಸೆಕೆಂಡು, ದೇವರಾಜ್‍ಗೆ ಕಣ್ಣು ಕಾಣಲ್ಲ

  3 gante movie image

  ಕನ್ನಡದಲ್ಲಿ ಅಂಧರ ಪಾತ್ರಧಾರಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಕವಚ ಚಿತ್ರದಲ್ಲಿ ಅಂಧರಾಗುತ್ತಿದ್ದರೆ, ಸಂಹಾರದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇವರಿಬ್ಬರಿಗಿಂತ ಅಂಧನಾಗಿ ಮೊದಲು ಬರುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್.

  3 ಗಂಟೆ, 30 ದಿನ, 30 ಸೆಕೆಂಡ್ ಚಿತ್ರದಲ್ಲಿ ದೇವರಾಜ್ ಅವರದ್ದು ಅಂಧನ ಪಾತ್ರ. ಇಡೀ ಚಿತ್ರದ ಹೈಲೈಟೇ ಅದು. ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಕಣ್ಣು ಕಳೆದುಕೊಂಡಿರುವ ಸೈನಿಕನ ಪಾತ್ರ ದೇವರಾಜ್ ಅವರದ್ದು. ಇಡೀ ಚಿತ್ರ ಟೇಕಾಫ್ ಆಗುವುದೇ ದೇವರಾಜ್ ಪಾತ್ರದಿಂದ ಎನ್ನುತ್ತಾರೆ ನಿರ್ದೇಶಕ ಮಧುಸೂದನ್. ಚಿತ್ರವನ್ನು ಭರ್ಜರಿಯಾಗಿ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಸಾಲಿ.

  ಅಂದಹಾಗೆ ದೇವರಾಜ್‍ಗೆ ಅಂಧನ ಪಾತ್ರ ಹೊಸದಲ್ಲ. ಈ ಹಿಂದೆ ಎಸ್‍ಪಿ ಬಾರ್ಗವಿ ಚಿತ್ರದಲ್ಲಿ ಇರುಳು ಕುರುಡನ ಪಾತ್ರದಲ್ಲಿ ಮಿಂಚಿದ್ದರು. ಇತ್ತೀಚೆಗೆ ವಿಭಿನ್ನ ಪಾತ್ರಗಳಿಂದ ಅಭಿನಯದ ವೈಭವ ಪರಿಚಯಿಸುತ್ತಿರುವ ದೇವರಾಜ್‍ಗೆ, 3 ಗಂಟೆ, 30 ದಿನ, ಸೆಕೆಂಡಿನಲ್ಲೂ ವಿಶೇಷ ಪಾತ್ರ ದಕ್ಕಿದೆ.

 • 30 ಸೆಕೆಂಡಿನ ಕಥೆ ಏನೋ ಡಿಫರೆಂಟ್ ಕಣ್ರಿ..

  3 gante 30 minutes 30 seconds movie image

  3 ಗಂಟೆ, 30 ದಿನ, 30 ಸೆಕೆಂಡು.. ಟೈಟಲ್‍ನಿಂದಲೇ ವಿಚಿತ್ರ ಕುತೂಹಲ ಮೂಡಿಸಿರುವ ಸಿನಿಮಾ. ಟೈಟಲ್ ಅಷ್ಟೇ ಅಲ್ಲ, ಕಥೆಯೂ ಹಾಗೆಯೇ ಇದೆಯಂತೆ. ಇದು ಒಂಥರಾ ಲವ್ ಚಾಲೆಂಜ್ ಚಿತ್ರ. 

  ಚಿತ್ರದ ಹೀರೋ ಅವಿನಾಶ್, ಎಂಥವನೆಂದರೆ, ಸಮಸ್ಯೆ ಯಾವುದೇ ಇರಲಿ ಬಗೆಹರಿಸಬಲ್ಲ ಚಾಣಾಕ್ಷ. ರಾಜಕಾರಣಿಯೊಬ್ಬನ ಮಗನ ಸಮಸ್ಯೆ ನಿವಾರಿಸಲು, ಇಡೀ ರಾಜ್ಯವೇ ತುದಿಗಾಲಲ್ಲಿ ಕೂರುವಂತಹ ನಾಟಕವೊಂದನ್ನು ಸೃಷ್ಟಿಸಿಬಿಡುತ್ತಾನೆ.

  ಇನ್ನು ನಾಯಕಿ ಒಬ್ಬ ಟಿವಿ ಆ್ಯಂಕರ್. ಆಕೆ ಪ್ರೀತಿ ಸತ್ಯಾನಾ..? ಮಿಥ್ಯಾನಾ..? ಅನ್ನೋ ಟಿವಿ ಡಿಬೇಟ್ ಶುರು ಮಾಡುತ್ತಾಳೆ. ಈ ಡಿಬೇಟ್‍ನಲ್ಲಿ ನಾಯಕಿ ಹಾಗೂ ನಾಯಕನ ಮಧ್ಯೆ ಸವಾಲ್ ಬೀಳುತ್ತೆ. ಭಾವನೆಗಳನ್ನೇ ನಂಬದ ನಾಯಕಿ, ಮೌಲ್ಯಗಳೇ ಇಲ್ಲದ ನಾಯಕ, ಅವರ ಮಧ್ಯೆ ಪ್ರೀತಿಯೇ ದೇವರೆಂದು ಭಾವಿಸಿ ಜೀವಿಸುತ್ತಿರುವ ಪ್ರೇಮಿಗಳು.. ಹೀಗೆ ಕಥೆ ಥ್ರಿಲ್ಲಾಗಿ ಸಾಗುತ್ತೆ.

  ಇಂಥ ಕಥೆಗೆ 3 ಗಂಟೆ, 30 ದಿನ, 30 ಸೆಕೆಂಡು.. ಎಂದೇಕೆ ಹೆಸರಿಟ್ಟರು ಅನ್ನೋದೇ ಸಸ್ಪೆನ್ಸ್. ಸೆಕೆಂಡುಗಳಲ್ಲಿ ಅರ್ಥವಾಗುತ್ತೆ. ಸಿನಿಮಾ ನೋಡಿ.

 • ಪಾಕ್‍ನ ಸಾವಿರಾರು ಸೈನಿಕರನ್ನು ಕ್ಷಣದಲ್ಲಿ ಸಮಾಧಿ ಮಾಡಿದ್ದ ಸೈನಿಕ..!

  great warrior story

  ನಮಗೆ ಕಾರ್ಗಿಲ್ ಕಥೆ ಗೊತ್ತು. ಪಾಕ್ ಸೈನಿಕರನ್ನು ನಮ್ಮ ಸೈನಿಕರು ಹೇಗೆ ಸದೆಬಡಿದರು, ಪ್ರಾಣಾರ್ಪಣೆ ಮಾಡಿದವರೆಷ್ಟು ಜನ.? ಪಾಕಿಸ್ತಾನದ ಕುತಂತ್ರ ಹೇಗಿತ್ತು..? ಹೀಗೆ ನಮಗೆ ಇಂಥ ಹಲವಾರು ಕಥೆಗಳು ಗೊತ್ತು. ಆಧರೆ, ಈ ಕಥೆ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ. ಹಾಗೆ ನೋಡಿದರೆ, ಈ ಯೋಧನ ಪರಾಕ್ರಮ, ಸಮಯಸ್ಫೂರ್ತಿಯ ಗೆಲುವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು ಎಂಬ ವಾದವೂ ಇದೆ.

  ಈ ಘಟನೆ ನಡೆದಿದ್ದು ಕಾರ್ಗಿಲ್ ಯುದ್ಧ ಆರಂಭಕ್ಕೂ ಮುನ್ನ. ನೀಲಂ ಕಣಿವೆಯಲ್ಲಿ ಇಂಡಿಯನ್ ಆರ್ಮಿ ಫಾರ್ವರ್ಡ್ ಲಾಜಿಸ್ಟಿಕ್ ಬೇಸ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪಾಕಿಸ್ತಾನದ ಸಾವಿರಾರು ಯೋಧರು, 40 ಟ್ಯಾಂಕರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಆದರೆ, ಭಾರತದ ಬಳಿ ಇದ್ದದ್ದು ಕೇವಲ ನೂರು ಸೈನಿಕರು. ಸ್ವಲ್ಪ ಏಮಾರಿದರೆ ಟಿತ್‍ಪಾಲ್ ಪ್ರಾಂತ್ಯ ಕೈತಪ್ಪುವ ಭೀತಿಯಿತ್ತು. 

  ಆದರೆ ಅಲ್ಲೊಬ್ಬ ಸೈನಿಕನಿದ್ದ. ಆತ ಎಂತಹ ಪರಾಕ್ರಮ & ಬುದ್ದಿವಂತಿಕೆ ಮೆರೆದನೆಂದರೆ, ಪಾಕ್ ಸೈನಿಕರು ಗೊತ್ತೇ ಆಗದಂತೆ ಸಮಾಧಿಯಾಗಿಬಿಟ್ಟರು. ಆಗ ಅಲ್ಲಿದ್ದ ಯೋಧ ಕ್ಯಾ.ಸುಂದರಂ, ತಕ್ಷಣ ಶೌರ್ಯ ಮತ್ತು ತಲೆ ಎರಡನ್ನೂ ಉಪಯೋಗಿಸಿದರು.ಅಲ್ಲಿದ್ದ 30 ಡಿಗ್ರಿ ಆ್ಯಂಗಲ್‍ನಲ್ಲಿದ್ದ ಮಾಸ್ ರಾಕ್ ಬಂಡೆಯೊಂದರ ಬಿರುಕನ್ನು ಗುರುತಿಸಿದ್ದರು. ಅದು ಬಿರುಕುಬಿಟ್ಟಿತ್ತು. ತಡಮಾಡದೆ, ತಮ್ಮ ಸೈನಿಕರಿಂದ ಕವರ್ ಫೈರಿಂಗ್ ತೆಗೆದುಕೊಂಡು ಮುಂದುವರಿದರು. ಆ ಬಿರುಕಿಗೇ ಗ್ರೈನೇಡ್ ಫಿಕ್ಸ್ ಮಾಡಿ ನೆಗೆದುಬಿಟ್ಟರು. 

  ನಂತರ ಸೃಷ್ಟಿಯಾಗಿದ್ದು ಹಿಮಪಾತ. ಹಿಮಪಾತ ಬಿದ್ದಿದ್ದು ದಾಳಿಗೆ ಸಿದ್ಧರಾಗಿದ್ದ ಪಾಕ್ ಸೈನಿಕರ ಮೇಲೆ. ನೋಡ ನೋಡುತ್ತಲೇ ಸಮಾಧಿಯಾಗಿ ಹೋದರು. ಇಂದಿಗೂ ಅದನ್ನು ಪಾಕಿಸ್ತಾನ ನೈಸರ್ಗಿಕ ಹಿಮಪಾತ ಎಂದು ಹೇಳಿಕೊಂಡೇ ಬರುತ್ತಿದೆ.

  ಆದರೆ, ಅಂದು ಶಿಖರದ ಮೇಲೆ ಹೋಗಿ, ಬಿರುಕಿಗೆ ಗ್ರೈನೇಡ್ ಇಟ್ಟು ಬಂದ ಕ್ಯಾ. ಸುಂದರಂ ಇಂದಿಗೂ ಇದ್ದಾರೆ. ಅಂದಿನ ಆ ಪರಾಕ್ರಮ ಅವರ ಬದುಕನ್ನೇ ಕಿತ್ತುಕೊಂಡಿದೆ. ಅವರಿಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ. ಮಾತನಾಡೋಕೆ ಆಗಲ್ಲ. 

  ಬೇರೆಯವರಾಗಿದ್ದರೆ ಹುಚ್ಚರಾಗುತ್ತಿದ್ದರೇನೋ.. ಆದರೆ, ಒಬ್ಬ ಹೆಣ್ಣು ಮಗಳ ಪ್ರೀತಿ ಸುಂದರಂ ಬದುಕನ್ನು ಸಹನೀಯವಾಗಿಸಿದೆ. ಸುಂದರವಾಗಿಸಿದೆ. ಅಂದಹಾಗೆ, ತೆರೆಗೆ ಬರಲು ಸಿದ್ಧವಾಗಿರುವ 3 ಗಂಟೆ 30 ದಿನ, 30 ಸೆಕೆಂಡು ಸಿನಿಮಾದಲ್ಲಿರೋದು ಇದೇ ಕ್ಯಾ.ಸುಂದರಂ ಕಥೆ. ಆ ಪಾತ್ರದಲ್ಲಿ ನಟಿಸುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್. ಅವರ ಸಾಹಸ ಹಾಗೂ ಬದುಕಿನ ಸ್ಫೂರ್ತಿಯ ಕಥೆಯನ್ನು ಮಿಸ್ ಮಾಡದೇ ನೋಡಿ. ಅದು ಒಬ್ಬ ಯೋಧನ ಸಾಹಸ & ಪ್ರೀತಿಯ ಕಥೆ.

 • ಪ್ರೀತೀನಾ.. ಐಶ್ವರ್ಯಾನಾ..? ಸೆಕೆಂಡ್‍ಗಳಲ್ಲಿ ತಿಳ್ಕೊಳ್ಳಿ..!

  3 gante 30 minutes 30 seconds movie image

  ತರ್ಕ, ಮನಸಿನ ಭಾಷೆ. ಭಾವನೆ, ಹೃದಯದ ಭಾಷೆ. ತರ್ಕಬದ್ಧವಾಗಿ ಆಲೋಚನೆ ಮಾಡುವವರು ಜೀವನದಲ್ಲಿ ಹಣ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಪಡೀತಾರೆ. ಭಾವನೆಗಳಿಗೆ ಬದ್ಧವಾಗಿರುವವರು ಸದಾ ನೆಮ್ಮದಿಯಾಗಿ, ಸುಖಿಗಳಾಗಿರುತ್ತಾರೆ.

  ಈ ಎರಡೂ ಒಬ್ಬರಿಗೇ ಸಿಕ್ಕುವುದು ಅಪರೂಪ. ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳೋಕೆ ಸಾಧ್ಯ. ಇಂಥಾದ್ದೊಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾ 3 ಗಂಟೆ, 30 ದಿನ , 30 ಸೆಕೆಂಡ್.

  ಚಿತ್ರದ ಹೆಸರು ವಿಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ ಅನ್ನೋದು ಚಿತ್ರದ ನಿರ್ದೇಶಕ ಮಧುಸೂದನ್. ಚಿತ್ರದ ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಪ್ರೀತಿಯ ಪೋಸ್ಟ್‍ಮಾರ್ಟಮ್. ಚಿತ್ರಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್ ಆರ್. ಪದ್ಮಶಾಲಿಯವರಷ್ಟೇ ಅಲ್ಲ, ಇಡೀ ಚಿತ್ರತಂಡದಲ್ಲಿರುವ ಬಹುತೇಕರು ಪರಸ್ಪರ ಗೆಳೆಯರು. 

  ಪ್ರೇಕ್ಷಕರ ಹೃದಯ ಕದಿಯಲು 30 ಸೆಕೆಂಡ್ ಸಾಕು ಎಂಬ ವಿಶ್ವಾಸದಲ್ಲಿದೆ ಚಿತ್ರ ತಂಡ. ಸೆಕೆಂಡ್ ಲೆಕ್ಕ ಅಲ್ವಾ..? ನೋಡೇ ನೋಡ್ತಿವಿ ಬಿಡಿ.

#

Chamak Movie Gallery

Rightbanner02_tora_inside

Anjaniputra Movie Gallery